ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಾನಾ ರೀತಿಯ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಿಂದಿನ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು ಎಂದು ಅಣ್ಣಾಮಲೈ (Annamalai) ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಬಿಜೆಪಿ (BJP) ಕೆಲವರ ಕಪಿಮುಷ್ಠಿಯಲ್ಲಿದೆ. ಇದರಿಂದ ಈ ರೀತಿ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಿದ್ದ ಅಣ್ಣಾಮಲೈ ಕರೆದುಕೊಂಡು ಹೋಗಿ ತಮಿಳುನಾಡಿನ (Tamil Nadu) ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಚುನಾವಣೆಯಲ್ಲಿ (Election) ಸೋಲಭವಿಸಿದರು. ಒಂದು ಸಲವು ಚುನಾವಣೆಯಲ್ಲಿ ಗೆಲ್ಲದ ಈ ವ್ಯಕ್ತಿಯನ್ನು ಚುನಾವಣೆಯ ಸಹ ಉಸ್ತುವಾರಿಯಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಅಣ್ಣಾಮಲೈ ಅಂತವರ ಅವರ ಮುಂದೆ ಹಿರಿಯ ನಾಯಕರು ಸಣ್ಣ ಮಕ್ಕಳಂತೆ ಕುಳಿತುಕೊಳ್ಳಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಮುಂದೆ ಕುಳಿತಿದ್ದರೆ ಅವರ ಹಿಂದಿನ ಸಾಲಿನಲ್ಲಿ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು. ನಾವು ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಇಂತಹ ಅವಮಾನಗಳನ್ನು ಎದುರಿಸಿದ್ದೇನೆ ಎಂದು ಕಿಡಿಕಾರಿದರು.