April 10, 2026
Friday, April 10, 2026
spot_img

ನಾವು-ನೀವು ಬಂಗಾರ ತಗೋಬಹುದು ಅನ್ಸುತ್ತೆ! ಸತತ ಇಳಿಕೆಯಲ್ಲಿ ಚಿನ್ನ-ಬೆಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿ ಇಳಿಕೆಯ ಪ್ರವೃತ್ತಿ ಮುಂದುವರಿದಿದ್ದು, ಈಗ ಬೆಲೆಗಳು ಮತ್ತೊಮ್ಮೆ ಕಡಿಮೆಯಾಗಿವೆ. ಸೋಮವಾರ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದ್ದ ಚಿನ್ನದ ದರ, ಮಂಗಳವಾರವೂ ಸ್ವಲ್ಪ ಕುಸಿತ ದಾಖಲಿಸಿದೆ.

ಇಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 100–150 ರೂಪಾಯಿ ಇಳಿಕೆಯಾಗಿದ್ದು, ಅಪರಂಜಿ ಚಿನ್ನದ ಬೆಲೆ15,175 ರಿಂದ 15,200 ರೂಪಾಯಿ ಶ್ರೇಣಿಯಲ್ಲಿ ಇದೆ. ಆಭರಣವೂ ಇದೇ ರೀತಿಯ ಇಳಿಕೆಯನ್ನು ಕಂಡಿದ್ದು, 13,900–13,925 ರೂಪಾಯಿಗಳ ನಡುವೆ ವಹಿವಾಟು ನಡೆಯುತ್ತಿದೆ.

ಇದನ್ನೂ ಓದಿ:

ಇತ್ತ ಬೆಳ್ಳಿ ಬೆಲೆಗಳಲ್ಲಿ ಕೂಡ ಭಾರಿ ಇಳಿಕೆ ಮುಂದುವರಿದಿದೆ. ಮಂಗಳವಾರ ಪ್ರತಿ ಗ್ರಾಂಗೆ 20 ರೂಪಾಯಿ ಕಡಿಮೆಯಾಗಿ, ಈಗ 280 ರೂಪಾಯಿಗೆ ತಲುಪಿದೆ. ಕೆಲ ದಿನಗಳ ಹಿಂದೆ 425 ರೂಪಾಯಿ ಇದ್ದ ಬೆಳ್ಳಿ ದರ, ಈಗ ಗಣನೀಯವಾಗಿ ಇಳಿದಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,39,100 ರೂಪಾಯಿ ಇದ್ದರೆ, 24 ಕ್ಯಾರಟ್ ಚಿನ್ನ 1,51,750 ರೂಪಾಯಿ ಮಟ್ಟದಲ್ಲಿದೆ. ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 100 ಗ್ರಾಂಗೆ 28,000 ರೂಪಾಯಿಯಲ್ಲೇ ಸ್ಥಿರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !