April 13, 2026
Monday, April 13, 2026
spot_img

ಕದನ ವಿರಾಮ ಘೋಷಣೆ ಆಗುತ್ತಿದ್ದಂತೆಯೇ ವಾಪಾಸ್‌ ಕರೆಸಿಕೊಳ್ಳುತ್ತೇವೆ: ಕೃಷ್ಣಭೈರೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಸಾಕಷ್ಟು ಕನ್ನಡಿಗರು ಸಿಲುಕಿದ್ದಾರೆ. ಆದರೆ ಅವರನ್ನು ಆದಷ್ಟು ಬೇಗ ರಾಜ್ಯಕ್ಕೆ ಕರೆತರುವ ಎಲ್ಲ ಪ್ರಯತ್ನ ಮಾಡ್ತಿದ್ದೇವೆ. ಈ ಬಗ್ಗೆ ಸರ್ಕಾರ ಕ್ರಮವಹಿಸಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಆತಂಕ ಬೇಡ, ನಾವು ನಮ್ಮ ಕೈಲಾದ ಎಲ್ಲ ಕೆಲಸಗಳನ್ನು ಮಾಡ್ತಾ ಇದ್ದೀವಿ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಎಲ್ಲರ ರಕ್ಷಣೆ ನಮ್ಮ ಆದ್ಯತೆ. ಕದನ ವಿರಾಮ ಘೋಷಣೆ ಆಗುತ್ತಿದ್ದಂತೆಯೇ ಎಲ್ಲರನ್ನೂ ವಾಪಾಸ್‌ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ.

ನಾವು ಈಗಾಗಲೇ ಸಹಾಯವಾಣಿ ಆರಂಭ ಮಾಡಿದ್ದೀವಿ. ಈವರೆಗೂ 109 ಜನರಿಂದ ಕರೆ ಬಂದಿದೆ. ಅವರ ಜೊತೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ 3 ವಿಷಯಗಳ ಬಗ್ಗೆ ಆತಂಕ ಇದೆ. ನಮ್ಮನ್ನ ಹೇಗೆ ವಾಪಸ್ ಕರೆಸುತ್ತೀರಾ? ವಿಶೇಷ ವಿಮಾನದ ಮೂಲಕನಾ ಹೇಗೆ ಅಂತ. ನಾವು ಕೇಂದ್ರದ ಜೊತೆ ಮಾತಾಡ್ತಾ ಇದ್ದೇವೆ. ಸದ್ಯ ಈಗ ಏರ್ ಟ್ರಾಫಿಕ್ ನಿಷೇಧ ಆಗಿದೆ. ಏರ್ ಟ್ರಾಫಿಕ್ ಕ್ಲಿಯರ್ ಆದ ಕೂಡಲೇ ಕೇಂದ್ರ ಸರ್ಕಾರ ಹೇಗೆ ಕರೆಸಿಕೊಳ್ಳುತ್ತದೆ ಎನ್ನುವುದನ್ನು ಹೇಳುತ್ತದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !