ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಿ ಪ್ರಜೆಗಳು ನಮ್ಮಲ್ಲಿದ್ದಾರಾ ಅನ್ನೋದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅಧಿಕೃತವಾಗಿ ಇರುವವರು, ಅನಧಿಕೃತವಾಗಿ ಇರುವವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇವೆ. ಅದರಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾರಿದ್ದಾರೆ, ಅಧಿಕೃತವಾಗಿ ಯಾರಿದ್ದಾರೆ ಎಂದು ತಿಳಿದು ಅವರನ್ನೆಲ್ಲ ವಾಪಸ್ ಕಳುಹಿಸಲೇಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರ ವಾಪಸ್ ಕಳಿಸುವ ತೀರ್ಮಾನ ತೆಗೆದುಕೊಂಡಿದೆ. ಅನಧಿಕೃತವಾಗಿ ಇರುವುದರ ಬಗ್ಗೆ ಪರಿಶೀಲಿಸಬೇಕು. ಅಧಿಕೃತವಾಗಿ ಇರೋರನ್ನು ಕಳಿಸುವುದಕ್ಕೆ ತಕರಾರಿಲ್ಲ. ಈಗಾಗಲೇ ವೀಸಾ ಕ್ಯಾನ್ಸಲೇಷನ್ ಮಾಡಲಾಗಿದೆ, ವಾಪಸ್ ಹೋಗಿ ಅಂತ ಹೇಳಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಪಸ್ ಹೋಗಿ ಅಂತ ಹೇಳೋದಷ್ಟೇ ನಮ್ಮ ಕೆಲಸ. ಅನಧಿಕೃತವಾಗಿ ಇಲ್ಲಿ ಇರುವವರನ್ನು ಪೊಲೀಸರು ಹುಡುಕ್ತಿದ್ದಾರೆ ಎಂದು ಹೇಳಿದರು.