ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಬಡವರಿಗೆ ಅತಿ ಹೆಚ್ಚು ಸಹಾಯವಾಗುವ ಅನ್ನ ಭಾಗ್ಯ ಯೋಜನೆ ನಾಳೆಯಿಂದ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರದಿಂದ ಐದು ಕೆಜಿ ಅಕ್ಕಿ ದೊರೆಯುತ್ತದೆ, ಅದರ ಜೊತೆಗೆ ಸರ್ಕಾರ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದು, ಅದು ಸಾಧ್ಯವಾಗದ ಹಿನ್ನೆಲೆ ಐದು ಕೆಜಿಯಷ್ಟು ಅಕ್ಕಿಯ ಹಣವನ್ನು ಖಾತೆಗೆ ಹಾಕಲಾಗುತ್ತದೆ.
ಖಾತೆ ಇರುವವರಿಗೆ ನೇರವಾಗಿ ಹಣ ಹೋಗುತ್ತದೆ. ಅಕೌಂಟ್ ಇಲ್ಲದವರು ಮಾಡಿಸಿಕೊಳ್ಳಬೇಕು, ಅಕ್ಕಿ ಸಿಗುವವರೆಗೂ ಹಣ ನೀಡುವ ವ್ಯವಸ್ಥೆ ಇದೆ ಎಂದಿದ್ದಾರೆ. ಕೇಂದ್ರದ ಬಳಿ ಅಕ್ಕಿ ಇದೆ, ಅವರು ಕೊಡುವ ಮನಸ್ಸು ಮಾಡಿದರೂ ಈಗಲೂ 10 ಕೆಜಿ ಕೊಡೋದಕ್ಕೆ ನಾವು ಬದ್ಧ. ಸದ್ಯಕ್ಕೆ ನಾಳೆಯಿಂದ ಖಾತೆಗೆ 170 ರೂಪಾಯಿ ಬರಲಿದೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್‌ನಲ್ಲಿ ಬ್ಯಾಂಕ್ ಅಕೌಂಟ್ ಹಾಗೂ ಪ್ಯಾನ್ ಮಾಹಿತಿ ಇಲ್ಲದೆ ಹಣ ಕಳಿಸುವುದು ದೊಡ್ಡ ತಲೆನೋವಾಗಿತ್ತು. ಆದರೆ ಇದೀಗ ಬಿಪಿಎಲ್ ಕಾರ್ಡ್‌ಧಾರರ ಪೈಕಿ ಶೇ. 99.99%ರಷ್ಟು ಮಂದಿ ಆಧಾರ್ ಸೀಡಿಂಗ್ ಮಾಡಿಸಿದ್ದಾರೆ. ಇನ್ನುಳಿದ 1.11% ಮಂದಿ ಲಿಂಕ್ ಮಾಡಿಕೊಳ್ಳಬೇಕಿದೆ. ಲಿಂಗ್ ಆದ ನಂತರ ಎಲ್ಲ ಖಾತೆಗೂ ಹಣ ಹೋಗಲಿದೆ ಎಂದಿದ್ದಾರೆ.