ಹೊಸದಿಗಂತ ಡಿಜಿಟಲ್ ಡೆಸ್ಕ್:
I.N.D.I.A ಬಣ ಅಧಿಕಾರಕ್ಕೆ ಬಂದರೆ ‘ಕಿಸಾನ್ ಕರ್ಜಾ ಮಾಫಿ ಆಯೋಗ್’ ತರುತ್ತೇವೆ ಮತ್ತು ರೈತರ ಸಾಲವನ್ನು ಎಷ್ಟು ಬಾರಿ ಬೇಕಾದರೂ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಯ ನಡುವೆ ಪ್ರಮುಖ ಭರವಸೆ ನೀಡಿದ್ದಾರೆ.
ಲೂಧಿಯಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಇತಿಹಾಸದಲ್ಲಿ ಮೊದಲ ಬಾರಿಗೆ ಈ ಚುನಾವಣೆ ಸಂವಿಧಾನವನ್ನು ಉಳಿಸಲು ಆಗಿದೆ. ಪಕ್ಷವೊಂದು ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಕಿತ್ತುಹಾಕುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದು ಇದೇ ಮೊದಲು. ಬಿಜೆಪಿ ಕೇವಲ ಕೋಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತದೆ ಮತ್ತು ದೇಶದಲ್ಲಿ 22-25 ಜನರ ಆಡಳಿತವನ್ನು ಬಯಸುತ್ತದೆ ಎಂದು ವಯನಾಡಿನ ಹಾಲಿ ಸಂಸದರು ಆರೋಪಿಸಿದ್ದಾರೆ.