ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿರುವವರೆಗೆ ನಾವು ಮೀಸಲಾತಿ ಕೇಳಲ್ಲ: ಸಿಎಂ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿರುವವರೆಗೆ ನಾವು ಮೀಸಲಾತಿ ಕೇಳಲ್ಲ” ಎಂಬ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದ ಹೋರಾಟವನ್ನು ಸಿಎಂ ಅಸಂವಿಧಾನಿಕವೆಂದು ವಿಧಾನಸೌಧದಲ್ಲಿ ಹೇಳಿಕೆ ನೀಡಿರುವುದು ಅವಮಾನಕರ. “ನಮ್ಮನ್ನು ಹೊಡೆಯುವ ಕೆಲಸವನ್ನು ಸಿಎಂ ಮಾಡಿದ್ದಾರೆ, ಇದು ಕ್ಷಮಿಸುವಂತದ್ದಲ್ಲ” ಎಂದು ಸ್ವಾಮೀಜಿ ಹೇಳಿ, ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

ಡಿಸೆಂಬರ್ 10: ಲಿಂಗಾಯತ ಕರಾಳ ದಿನಾಚರಣೆ
ಕಳೆದ ಡಿಸೆಂಬರ್ 10ರಂದು ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆದಿರುವುದರಿಂದ, ಈ ವರ್ಷ ಇದೇ ದಿನವನ್ನು ‘ಲಿಂಗಾಯತ ಕರಾಳ ದಿನ’ವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ. “ಅಂದು ನಮ್ಮ ಹಕ್ಕಿಗಾಗಿ ಹೋರಾಡಿದವರಿಗೆ ಲಾಠಿ ಹೊಡೆದ ಸರ್ಕಾರವಿರುವವರೆಗೆ ನಾವು ಬೆನ್ನು ಬಾಗುವುದಿಲ್ಲ. 50 ಸಾವಿರಕ್ಕೂ ಹೆಚ್ಚು ಹೋರಾಟಗಾರರು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಲಿದ್ದಾರೆ” ಎಂದು ಸ್ವಾಮೀಜಿ ಹೇಳಿದ್ದಾರೆ.

ಸಮಾಜದ ಹೊಣೆಗಾರಿಕೆ ಹೆತ್ತವರಿಗೆ, ವಿಶೇಷವಾಗಿ ಪಂಚಮಸಾಲಿ ಸಮುದಾಯದ ಶಾಸಕರಿಗೆ ಕಠಿಣ ಸಂದೇಶವೊಂದನ್ನು ನೀಡಿದ್ದಾರೆ. “ಸಮಾಜದ ಅನ್ನ ತಿಂದವರು ಧ್ವನಿ ಎತ್ತಬೇಕು. ಋಣ ತೀರಿಸಿದ್ರೆ ಇತಿಹಾಸದಲ್ಲಿ ಉಳಿಯುತ್ತೀರಿ, ಇಲ್ಲಾಂದ್ರೆ ಅಳಿಯುತ್ತೀರಿ” ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!