ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ಬೆಲೆ ಏರಿಕೆ ಸೇರಿದಂತೆ ವಿವಿಧ ವೈಫಲ್ಯಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿ, ಬೆಲೆ ಏರಿಕೆ, ಮುಸ್ಲಿಂ ಮೀಸಲಾತಿ, ಎಸ್ಸಿಪಿಪ-ಪಿಎಸ್ಟಿ ಹಣ ದುರುಪಯೋಗದ ವಿರುದ್ಧ ಏಪ್ರಿಲ್ 7ರಿಂದ ಜನಾಂದೋಲನ ಮಾಡುತ್ತೇವೆ. ನಾಲ್ಕು ಹಂತದ ಹೋರಾಟವನ್ನ ಮಾಡುತ್ತೇವೆ, 16 ದಿನಗಳ ಕಾಲ ಹೋರಾಟ ನಡೆಯಲಿದೆ ಎಂದರು.
ಒಟ್ಟಾರೆ, ನಾಲ್ಕು ಹಂತದಲ್ಲಿ ಹೋರಾಟ ನಡೆಯಲಿದೆ. ಕಾಂಗ್ರೆಸ್ ಆಡಳಿತದಲ್ಲಿ ವಿದ್ಯುತ್, ಹಾಲು, ಮಧ್ಯದ ದರ ಹೆಚ್ಚಾಗಿದೆ. ಮೆಟ್ರೋ, ಬಸ್, ಸರ್ಕಾರಿ ಶಾಲೆ ಶುಲ್ಕ, ಬೀಜ, ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾಗಿದೆ. ಜನರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆಯಿಂದ ಸಾಕಷ್ಟು ತೊಂದರೆಯಾಗಿದೆ. ರೈತರ ಹೆಸರಿನಲ್ಲಿ ಮೋಸಮಾಡಿ ಹಾಲಿನ ದರ ಮೂರು ಬಾರಿ ಹೆಚ್ಚಿಸಿದ್ದಾರೆ. ಯಾರಿಗೆ ಕೊಡುತ್ತಾರೆ ಎಂಬುದು ಇನ್ನೂ ಗೊತ್ತಿಲ್ಲ ಎಂದರು.