ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಲ್ಮೆಟ್ ಧರಿಸಿದ್ರೆ ಶೆಖೆಯಾಗಿ ಕೂದಲು ಉದುರುತ್ತದೆ, ಹೇರ್ ಸ್ಟೈಲ್ ಹಾಳಾಗುತ್ತದೆ, ಇಷ್ಟೇ ದೂರಕ್ಕೆ ಹೆಲ್ಮೆಟ್ ಯಾಕೆ, ಆ ಕಡೆ ಪೊಲೀಸ್ ಇರೋದಿಲ್ಲ ಹೆಲ್ಮೆಟ್ ಬೇಡ, ನೂರು ರೂಪಾಯಿ ಕೊಟ್ಟು ಹಾಫ್ ಹೆಲ್ಮೆಟ್ ತಗೋ ಸಾಕು..
ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಬಹುದು, ನೂರಕ್ಕೆ ಒಬ್ಬರಿಗೆ ಮಾತ್ರ ಅಪಘಾತ ಆಗುತ್ತದೆ ನಾವು ಸೇಫ್ ಎನ್ನುವವರು ಈ ಸುದ್ದಿಯನ್ನು ಓದಲೇಬೇಕು..
ಹೊಸಕೆರೆಹಳ್ಳಿಯ ನೈಸ್ ರಸ್ತೆ ಟೋಲ್ ಬಳಿ ಇಬ್ಬರು ಇಂಜಿನಿಯರ‍್ಸ್ ಕುಳಿತಿದ್ದ ಬೈಕ್‌ನ ಟೈರ್ ಬರ್ಸ್ಟ್ ಆಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಸುಲೋಚನಾ ಹಾಫ್ ಹೆಲ್ಮೆಟ್ ಧರಿಸಿದ್ದು, ಆನಂದ್ ಫುಲ್ ಹೆಲ್ಮೆಟ್ ಧರಿಸಿದ್ದರು.
ಹಾಫ್ ಹೆಲ್ಮೆಟ್ ಕಾರಣ ಸುಲೋಚನೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಲ್ಮೆಟ್ ನೆಪಮಾತ್ರಕ್ಕೆ ಹಾಕಿದ ಸುಲೋಚನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಫುಲ್ ಹೆಲ್ಮೆಟ್ ಧರಿಸಿದ್ದ ಆನಂದ್ ಜೀವಾಪಾಯದಿಂದ ಪಾರಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದ ಸುಲೋಚನಾ ಹಾಗೂ ಆನಂದ್ ಕೆಲಸ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ,