ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಬಿಸಿಲ ಝಳ ಹೆಚ್ಚಿದೆ. ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿಯಲ್ಲಿ ಕೂಡ ತಾಪಮಾನ ಹೆಚ್ಚಾಗಿದೆ.
ಗರಿಷ್ಠ ತಾಪಮಾನ ಕರಾವಳಿಯಲ್ಲಿ 33-36 ಡಿಗ್ರಿ ಸೆಲ್ಸಿಯಸ್, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಮತ್ತು ಕೊಪ್ಪಳದಲ್ಲಿ 33-34 ಡಿಗ್ರಿ ಸೆಲ್ಸಿಯಸ್, ಗದಗ, ಕಲಬುರಗಿ, ರಾಯಚೂರಿನಲ್ಲಿ 35-38 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮಂಡ್ಯ, ಮಡಿಕೇರಿ, ಚಿಂತಾಮಣಿಯಲ್ಲಿ 30-33 ಡಿಗ್ರಿ ಸೆಲ್ಸಿಯಸ್, ಆಗುಂಬೆ, ದಾವಣಗೆರೆ, ಮೈಸೂರಿನಲ್ಲಿ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.