ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ತಾಪ ಜನರನ್ನು ಬೆಚ್ಚಿ ಬೀಳಿಸುತ್ತದೆ. 10 ಗಂಟೆಯ ನಂತರ ಬಿಸಿಲು ಹೆಚ್ಚಾಗುತ್ತದೆ. ಎಷ್ಟೇ ನೀರು ಕುಡಿದರೂ ದೇಹ ನಿರ್ಜಲೀಕರಣವಾಗುತ್ತದೆ. ಈ ವಾರವೂ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕವಾಗಿರುತ್ತದೆ. ಮತ್ತು ರಾಯಚೂರು, ಗದಗ, ಶಿವಮೊಗ್ಗ, ಯಾದಗಿರಿ ಮತ್ತು ತುಮಕೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಧಾರವಾಡ, ಬಳ್ಳಾರಿ, ಕಲಬುರಗಿ ಮತ್ತು ಉತ್ತರ ಕನ್ನಡದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತಲುಪಿದೆ.