ರಾಜ್ಯಾದ್ಯಂತ ಚಳಿಯ ಅಲೆ ಮುಂದುವರಿದಿದ್ದು, ಜನವರಿ 22ರ ಇಂದಿನ ಹವಾಮಾನವು ಶುಷ್ಕ ಹಾಗೂ ಶೀತಲತೆಯಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನವಿದ್ದು, ಮಳೆಯ ಮುನ್ಸೂಚನೆ ಎಲ್ಲಿಯೂ ಕಂಡುಬಂದಿಲ್ಲ.
ಸಿಲಿಕಾನ್ ಸಿಟಿಯಲ್ಲಿ ಇಂದು ಹವಾಮಾನ ಅತ್ಯಂತ ಆಹ್ಲಾದಕರವಾಗಿರಲಿದೆ. ಮುಂಜಾನೆ ಸಾಧಾರಣ ಮಂಜು ಮುಸುಕಲಿದ್ದು, ಗರಿಷ್ಠ ತಾಪಮಾನ 28°C ಹಾಗೂ ಕನಿಷ್ಠ ತಾಪಮಾನ 16°C ದಾಖಲಾಗುವ ಸಾಧ್ಯತೆಯಿದೆ. ಗಾಳಿಯ ಗುಣಮಟ್ಟ ಸದ್ಯಕ್ಕೆ ಸಾಧಾರಣ ಸ್ಥಿತಿಯಲ್ಲಿದೆ.
ಉಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ತಾಪಮಾನವು 12°C – 14°C ವರೆಗೆ ಕುಸಿಯುವ ನಿರೀಕ್ಷೆಯಿದೆ. ಇನ್ನು ದಾವಣಗೆರೆಯಲ್ಲಿ ರಾಜ್ಯದ ಬಯಲು ಪ್ರದೇಶಗಳಲ್ಲೇ ಅತ್ಯಂತ ಕಡಿಮೆ ಅಂದರೆ 11.0°C ಕನಿಷ್ಠ ತಾಪಮಾನ ದಾಖಲಾಗಿದೆ.
ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ತಾಪಮಾನವು ಕೊಂಚ ಏರಿಕೆಯಾಗಲಿದ್ದು, ಗರಿಷ್ಠ ತಾಪಮಾನ 32°C ದಾಟಬಹುದು. ಸಮುದ್ರದ ಗಾಳಿಯ ವೇಗ ಮಂದಗತಿಯಲ್ಲಿರಲಿದೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಗುಡ್ಡಗಾಡು ಪ್ರದೇಶಗಳಲ್ಲಿ ದಟ್ಟ ಮಂಜು ಕವಿಯಲಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.




