September 22, 2026
Tuesday, September 22, 2026
spot_img

ಕ್ಯಾಪ್ಟನ್ ಕೂಲ್ ಗೆ ಬಿತ್ತು ಫೈನ್: ಅಷ್ಟಕ್ಕೂ ಧೋನಿ ಮಾಡಿದ ತಪ್ಪೇನು?

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ ದಂಡ ವಿಧಿಸಲಾಗಿದೆ.

ಧೋನಿ ತಮ್ಮ ರಾಂಚಿಯಲ್ಲಿರುವ ತಮ್ಮ ನಿವಾಸದ ಬಳಿ ಅತಿ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ 1000 ರೂ. ದಂಡ ವಿಧಿಸಲಾಗಿದೆ. ಹೀಗಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 183 ರ ಅಡಿಯಲ್ಲಿ ಅವರಿಗೆ ಇ-ಚಲನ್ ನೀಡಲಾಗಿದೆ.

ಇದರ ನಡುವೆ ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೂಡ ಎದುರಿಸುತ್ತಿದ್ದು, ಜಾರ್ಖಂಡ್ ರಾಜ್ಯ ವಸತಿ ಮಂಡಳಿ ಧೋನಿಗೆ ನೋಟಿಸ್ ಜಾರಿ ಮಾಡಿದೆ. ಈ ನಿವೇಶನವು ರಾಂಚಿಯ ಹರ್ಮು ರಸ್ತೆಯಲ್ಲಿದ್ದು, ಧೋನಿ ಈ ಹಿಂದೆ ರಿಂಗ್ ರಸ್ತೆಯಲ್ಲಿರುವ ತಮ್ಮ ಪ್ರಸ್ತುತ ನಿವಾಸಕ್ಕೆ ಸ್ಥಳಾಂತರಗೊಳ್ಳುವ ಮೊದಲು ಅಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಧೋನಿ ಮುಂಬರುವ ಐಪಿಎಲ್‌ ಟೂರ್ನಿಗೆ ಸಿದ್ಧತೆ ನೆಡೆಸುತ್ತಿದ್ದಾರೆ.ಸಹ ಆಟಗಾರರೊಂದಿಗೆ ಚೆಪಾಕ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !