ಪ್ರತಿವರ್ಷ ಮಾರ್ಚ್ ತಿಂಗಳಿನಿಂದ ಕಾಲಿಡುತ್ತಿದ್ದ ಬೇಸಿಗೆಯ ಬೇಗೆ ಈ ಬಾರಿ ಸ್ವಲ್ಪ ಮುಂಚಿತವಾಗಿಯೇ ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಫೆಬ್ರವರಿ ಮೂರನೇ ವಾರದಿಂದಲೇ ಬಿಸಿಲಿನ ತಾಪಮಾನ ತೀವ್ರಗೊಳ್ಳುವ ಸಾಧ್ಯತೆಯಿದೆ.
ಈಗಾಗಲೇ ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಸುಮಾರು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ಮಧ್ಯಾಹ್ನದ ವೇಳೆಗೆ ಸೂರ್ಯನ ಪ್ರಖರತೆ ಜನರನ್ನು ಬೆವರಿಸುತ್ತಿದೆ.
ರಾಜಧಾನಿಯಲ್ಲಿ ಗರಿಷ್ಠ 28°C ತಾಪಮಾನವಿರಲಿದ್ದು, ಮುಂಜಾನೆ 12°C ನಷ್ಟು ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಚಳಿ ಮತ್ತು ಬಿಸಿಲಿನ ಮಿಶ್ರ ವಾತಾವರಣ ಇರಲಿದೆ.



