ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ವಿಶಾಲ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಅವರು ಕುಸಿದ್ದು, ಬಿದ್ದಿದ್ದರು. ಇದೀಗ ಅವರ ಮದುವೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.
ಹೌದು, ವಿಶಾಲ್ ಕೃಷ್ಣ ಅವರು ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟಿ ಸಾಯಿ ಧನ್ಶಿಕಾ ಜೊತೆ ವಿಶಾಲ್ ಹಸೆಮಣೆ ಏರುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ವಿಶಾಲ್ ಅವರಿಗೆ ಈಗ 47 ವರ್ಷ ವಯಸ್ಸು. ಅವರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಮೊದಲಿನಿಂದಲೂ ಕೇಳಿಬರುತ್ತಿತ್ತು. ಈ ಹಿಂದೆ ಕೆಲವು ನಟಿಯರ ಜೊತೆಗೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿದ್ದುಂಟು. ಈಗ ಸಾಯಿ ಧನ್ಶಿಕಾ ಜೊತೆ ಅವರು ಮದುವೆ ಆಗುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಅವರಿಂದಲೇ ಅಧಿಕೃತ ಹೇಳಿಕೆ ಹೊರಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.