ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ವೆಡ್ಡಿಂಗ್ ಫೋಟೋ ಶೂಟ್ ನಿಷೇಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಇನ್ಮುಂದೆ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಿ ಶ್ರೀಕೃಷ್ಣ ಮಠ ಮಹತ್ವದ ಆದೇಶ ಹೊರಡಿಸಿದೆ.

ಈ ಕುರಿತು ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದ್ದು, ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಫೋಟೋ ಶೂಟ್ ನಿಂದಾಗಿ ಸ್ವಾಮೀಜಿಗಳ ಓಡಾಟಕ್ಕೆ ಹಾಗೂ ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ.

ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣ. ಪ್ರಿ ವೆಡ್ದಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣುತ್ತದೆ. ಫೋಟೋಶೂಠ್ ಹೆಸರಲ್ಲಿ ಮಠದ ರಥಬೀದಿಯಲ್ಲಿ ಸರಸ ಸಲ್ಲಾಪ ನಡೆಯುತ್ತಿದೆ. ಪ್ರತಿದಿನ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್ ನಂತಹ ಮುಜುಗರದ ಸನ್ನಿವೇಶ ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!