ಇಂದು ಆರೋಗ್ಯ ಅಂದಾಗ ತಕ್ಷಣ ನೆನಪಿಗೆ ಬರುವ ವಿಷಯ ತೂಕ. ಕೆಲವರಿಗೆ ಹೆಚ್ಚಿದ ತೂಕ ತಲೆನೋವಾದ್ರೆ, ಇನ್ನೂ ಕೆಲವರಿಗೆ ಕಡಿಮೆ ತೂಕವೇ ದೊಡ್ಡ ಸಮಸ್ಯೆ. ವಿಶೇಷವಾಗಿ ಯುವ ವಯಸ್ಸಿನಲ್ಲಿ ತೂಕ ಕಡಿಮೆ ಇದ್ದರೆ ದೌರ್ಬಲ್ಯ, ದಣಿವು, ಆತ್ಮವಿಶ್ವಾಸದ ಕೊರತೆ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ತೂಕ ಹೆಚ್ಚಿಸಿಕೊಳ್ಳಬೇಕು ಅಂತ ಅನಾವಶ್ಯಕವಾಗಿ ಜಂಕ್ ಫುಡ್ ಸೇವಿಸುವುದು ದೇಹಕ್ಕೆ ಹಾನಿಕಾರಕ. ಹೀಗಾಗಿ ಸರಿಯಾದ ಪೌಷ್ಟಿಕ ಆಹಾರ ಆಯ್ಕೆ ಮಾಡೋದೇ ಮುಖ್ಯ.
ತೂಕ ಹೆಚ್ಚಿಸಲು ಆಹಾರದ ಪಾತ್ರ:
ತೂಕ ಹೆಚ್ಚಿಸುವಲ್ಲಿ ಪ್ರೋಟೀನ್, ಕ್ಯಾಲೊರಿ ಮತ್ತು ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಡ್ರೈ ಫ್ರೂಟ್ಸ್, ಹಾಲು ಮತ್ತು ಹಣ್ಣುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಅಗತ್ಯ ಶಕ್ತಿ ಸಿಗುತ್ತದೆ.
ಮನೆಯಲ್ಲೇ ತಯಾರಿಸಬಹುದಾದ ಪ್ರೋಟೀನ್ ಡ್ರಿಂಕ್:
ಈ ಡ್ರಿಂಕ್‌ಗೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಖರ್ಜೂರ ಬಳಸಲಾಗುತ್ತದೆ. ಇವು ಶಕ್ತಿವರ್ಧಕವಾಗಿದ್ದು ಆರೋಗ್ಯಕರವಾಗಿ ತೂಕ ಹೆಚ್ಚಿಸಲು ಸಹಕಾರಿಯಾಗುತ್ತವೆ.
ತಯಾರಿಸುವ ವಿಧಾನ:
ಮೊದಲು ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಖರ್ಜೂರವನ್ನು ತೊಳೆದು ಬೌಲ್‌ನಲ್ಲಿ ಹಾಕಿ. ಇದಕ್ಕೆ ಕಾಯಿಸಿದ ಅರ್ಧ ಗ್ಲಾಸ್ ಹಾಲು ಸೇರಿಸಿ ಸುಮಾರು 30 ನಿಮಿಷ ನೆನೆಸಿಡಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅಗತ್ಯವಿದ್ದರೆ ಬಾಳೆಹಣ್ಣು ಅಥವಾ ಸೇಬು ಸೇರಿಸಬಹುದು. ಸಕ್ಕರೆ ಬೇಡ, ಖರ್ಜೂರದ ಸಿಹಿ ಸಾಕು.
ಯಾರಿಗೆ ಉಪಯುಕ್ತ?:
ಈ ಡ್ರಿಂಕ್ ಮಕ್ಕಳಿಗೂ, ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸೂಕ್ತ. ಊಟದ ನಂತರ ಸೇವಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

