ರಾತ್ರಿ ಪೂರ್ತಿ ನಿದ್ರೆಯಿಂದ ಎದ್ದಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗಿರುವುದು ಸಾಮಾನ್ಯ. ಇಂತಹ ಸಮಯದಲ್ಲಿ ಒಳ್ಳೆಯ ಪಾನೀಯದಿಂದ ದಿನವನ್ನು ಆರಂಭಿಸುವುದು ದೇಹಕ್ಕೆ ಅಗತ್ಯ ತೇವಾಂಶ, ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಬೆಳಗಿನ ವೇಳೆಯಲ್ಲಿ ಸರಿಯಾದ ಪಾನೀಯಗಳನ್ನು ಆಯ್ಕೆ ಮಾಡಿಕೊಂಡರೆ ಜೀರ್ಣಕ್ರಿಯೆ ಸುಧಾರಿಸಿ, ರೋಗನಿರೋಧಕ ಶಕ್ತಿ ಹೆಚ್ಚಿ, ತೂಕ ನಿಯಂತ್ರಣಕ್ಕೂ ಸಹಕಾರಿ. ಇಲ್ಲಿವೆ ದಿನವನ್ನು ಉಲ್ಲಾಸಭರಿತವಾಗಿ ಆರಂಭಿಸಲು ಸಹಾಯ ಮಾಡುವ 5 ಪ್ರಮುಖ ಪಾನೀಯಗಳು.
- ಜೀರಿಗೆ ನೀರು: ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಹೊಟ್ಟೆಯ ಉರಿ, ಗ್ಯಾಸ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಒಂದು ಚಮಚ ಜೀರಿಗೆಯನ್ನು ಬಿಸಿ ನೀರಿಗೆ ಹಾಕಿ ಸೋಸಿ ಕುಡಿಯುವುದು ಉತ್ತಮ.
- ಅಜ್ವೈನ್ ನೀರು: ಅಜ್ವೈನ್‌ನಲ್ಲಿರುವ ಥೈಮೋಲ್ ಅಸಿಡಿಟಿ ತಗ್ಗಿಸಿ, ತೂಕ ಇಳಿಕೆಗೆ ಸಹಕಾರಿ. ಅರ್ಧ ಚಮಚ ಅಜ್ವೈನ್ ಬಿಸಿ ನೀರಿಗೆ ಹಾಕಿ ತಣ್ಣಗಾದ ನಂತರ ಕುಡಿಯಿರಿ.
- ಎಳನೀರು: ಎಳನೀರಿನಲ್ಲಿರುವ ಲಾರಿಕ್ ಆಮ್ಲ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹವನ್ನು ತಕ್ಷಣ ಹೈಡ್ರೇಟ್ ಮಾಡುತ್ತದೆ. ತೂಕ ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ.
- ತರಕಾರಿ ಜ್ಯೂಸ್: ಹಸಿರು ತರಕಾರಿ ಜ್ಯೂಸ್‌ಗಳು ಕಬ್ಬಿಣಾಂಶ, ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧ. ಬೆಳಗಿನ ನಿಶ್ಯಕ್ತಿ ದೂರ ಮಾಡುವ ಉತ್ತಮ ಪಾನೀಯ.
- ಶುಂಠಿ ಚಹಾ: ಶುಂಠಿಯ ಜಿಂಜರಾಲ್ ಉರಿಯೂತ ಕಡಿಮೆ ಮಾಡಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ವ್ಯಾಯಾಮದ ನಂತರ ಕುಡಿಯಲು ಅತ್ಯುತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

