ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚುವುದು ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬಹುಪಾಲು ಜನರು ವಿಶ್ರಾಂತಿ ಇಲ್ಲದ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದಾಗಿ ಬೊಜ್ಜು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಡಯಾಬಿಟಿಸ್, ಹೃದಯ ಸಂಬಂಧಿತ ರೋಗಗಳು ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ಹಿನ್ನಲೆಯಲ್ಲಿ ಪೌಷ್ಟಿಕ ತಜ್ಞರು ಕೆಲವು ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಿದ್ದಾರೆ.
ಮಜ್ಜಿಗೆ (Buttermilk):
ಮಜ್ಜಿಗೆ ಕಡಿಮೆ ಕ್ಯಾಲೊರಿಯಿಂದ ಕೂಡಿದ್ದು, ಮಧ್ಯಾಹ್ನದ ಹೊತ್ತಿಗೆ ಹಸಿವನ್ನು ತಣಿಸುತ್ತೆ. ದೇಹದ ಜೀರ್ಣಕ್ರಿಯೆಗೆ ಸಹಾಯಮಾಡುವುದರೊಂದಿಗೆ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ. ತಣ್ಣನೆಯ ಮಜ್ಜಿಗೆಯನ್ನು ದಿನನಿತ್ಯ ಕುಡಿಯುವುದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಸರು ಬೆಳೆ (Moong Dal):
ಹೆಸರು ಬೆಳೆ ಪ್ರೋಟೀನ್ ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿದೆ. ಇದನ್ನು ಸೇವಿಸಿದರೆ ದೀರ್ಘಕಾಲ ಹಸಿವು ತಗ್ಗಿ, ದೇಹದಲ್ಲಿ ಹಾರ್ಮೋನ್ ಸಮತೋಲನವಾಗುತ್ತದೆ. ಇದು ಹೊಟ್ಟೆ ಸುತ್ತಲಿನ ಕೊಬ್ಬನ್ನು ಕರಗಿಸಲು ಉತ್ತಮ ಆಯ್ಕೆ.
ಹೂಕೋಸು (Cauliflower):
ಹೂಕೋಸಿನಲ್ಲಿ ಕಡಿಮೆ ಶರ್ಕರ ಮತ್ತು ಹೆಚ್ಚು ಫೈಬರ್ ಇರುವುದರಿಂದ ಇದು ತೂಕ ನಷ್ಟಕ್ಕೆ ಉತ್ತಮ. ಇದರಲ್ಲಿರುವ ಫೈಟೋನ್ಯೂಟ್ರಿಯಂಟ್ಸ್ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ಉಪಾಹಾರ ಅಥವಾ ಸೈಡ್ ಡಿಶ್ ರೂಪದಲ್ಲಿ ಬಳಸಬಹುದು.
ರಾಗಿ (Ragi):
ರಾಗಿ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ಫೈಬರ್‌ನಿಂದ ಸಮೃದ್ಧವಾಗಿದೆ ಮತ್ತು ಇನ್ಸುಲಿನ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ತೂಕ ಇಳಿಕೆಗೆ ಇದು ಭಾರತೀಯ ಆಹಾರದ ಪ್ರಮುಖ ಅಂಗವಾಗಿದೆ.
ತೆಂಗಿನ ನೀರು (Coconut Water):
ತೆಂಗಿನ ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಜೊತೆಗೆ ನೈಸರ್ಗಿಕ ಡಿಟಾಕ್ಸ್ ಎಫೆಕ್ಟ್ ನೀಡುತ್ತದೆ. ಇದು ಕೊಬ್ಬು ಕರಗಿಸಲು ಸಹಕಾರಿಯಾಗುತ್ತದೆ.