ಹೆಚ್ಚುವರಿ ತೂಕ ಅಥವಾ ಬೊಜ್ಜಿನಿಂದ ಬಳಲುವವರು ಮನೆಮದ್ದಾಗಿ ಬಳಸಬಹುದಾದ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು ಎಂದರೆ ಶುಂಠಿ. ವೈದ್ಯಕೀಯವಾಗಿ ಹಲವಾರು ಲಾಭಗಳನ್ನು ಹೊಂದಿರುವ ಶುಂಠಿ, ದೇಹದಲ್ಲಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಔಷಧೀಯ ಗುಣಗಳನ್ನು ಹೊಂದಿದೆ. ಉರಿಯೂತ ವಿರೋಧಿ, ಆಂಟಿ-ಆಕ್ಸಿಡೆಂಟ್ ಹಾಗೂ ಜೀರ್ಣಕ್ರಿಯೆ ಉತ್ತೇಜಕ ಗುಣಗಳಿಂದ ಸಮೃದ್ಧವಾಗಿರುವ ಈ ಮನೆಮದ್ದು, ದೈಹಿಕ ತೂಕದ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ.
ಶುಂಠಿ ನೀರಿನ ಸೇವನೆ:
ಬೊಜ್ಜು ಕಡಿಮೆ ಮಾಡಲು ಶುಂಠಿಯ ನೀರನ್ನು ದಿನನಿತ್ಯ ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ತೆಳುವಾಗಿ ಕತ್ತರಿಸಿದ ಶುಂಠಿಯನ್ನು ಸೇರಿಸಿ. ಇದನ್ನು 15 ನಿಮಿಷಗಳ ಕಾಲ ಕುದಿಸಿ ತಣ್ಣಗಾದ ನಂತರ ಫಿಲ್ಟರ್ ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಸಂಜೆ ಊಟದ ಮೊದಲು ಒಂದು ಲೋಟ ಕುಡಿಯುವುದು ಉತ್ತಮ. ಇದು ಜೀರ್ಣಶಕ್ತಿ ಸುಧಾರಣೆ, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.
ಕಾರ್ಟಿಸೋಲ್ ಮಟ್ಟ ಕಡಿಮೆ ಮಾಡುವ ಮೂಲಕ ಹೊಟ್ಟೆಯ ಕೊಬ್ಬು ಇಳಿಕೆ:
ಒತ್ತಡದಿಂದ ಉಂಟಾಗುವ ಕಾರ್ಟಿಸೋಲ್ ಹಾರ್ಮೋನ್ ದೇಹದಲ್ಲಿ ಕೊಬ್ಬು ಸಂಗ್ರಹಕ್ಕೆ ಕಾರಣವಾಗುತ್ತದೆ. ಶುಂಠಿ ನೀರು ಈ ಹಾರ್ಮೋನ್ನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೊಟ್ಟೆ, ತೊಡೆ ಮತ್ತು ಸೊಂಟದ ಭಾಗದಲ್ಲಿನ ಕೊಬ್ಬು ಕಡಿಮೆಗೆ ಸಹಾಯ ಮಾಡುತ್ತದೆ.
ಶುಂಠಿ – ಗ್ರೀನ್ ಟೀ ಸಂಯೋಜನೆ:
ಶುಂಠಿ ಹಾಗೂ ಗ್ರೀನ್ ಟೀಯು ತೂಕ ಇಳಿಕೆಗೆ ಮತ್ತೊಂದು ಶ್ರೇಷ್ಠ ಪರಿಹಾರವಾಗಿದೆ. ಗ್ರೀನ್ ಟೀಯಲ್ಲಿ ಇರುವ ಕ್ಯಾಟೆಚಿನ್ ಮತ್ತು ಕೆಫೀನ್ ತೂಕ ಇಳಿಸುವಿಕೆಗೆ ಉತ್ತೇಜನ ನೀಡುತ್ತವೆ. ಈ ಚಹಾವನ್ನು ದಿನವೂ ಬೆಳಗ್ಗೆ ಉಪಾಹಾರದೊಂದಿಗೆ ಕುಡಿಯುವುದು ಉತ್ತಮ ಫಲಿತಾಂಶ ನೀಡಬಹುದು.
ಶುಂಠಿ ಮತ್ತು ನಿಂಬೆ ಪಾನೀಯ:
ನಿಂಬೆ ಹಾಗೂ ಶುಂಠಿಯ ಸಂಯೋಜನೆಯು ದೇಹದ ಮೆಟಬಾಲಿಸಂ ಹೆಚ್ಚಿಸಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಒಂದು ಗ್ಲಾಸ್ ಕುದಿಯುವ ನೀರಿನಲ್ಲಿ ಶುಂಠಿ ಹಾಕಿ ಬೇಯಿಸಿ, ನಂತರ ಅದರಲ್ಲಿ ನಿಂಬೆರಸ ಹಾಗೂ ಚಿಟಿಕೆ ಉಪ್ಪು ಹಾಕಿ ಸೇವಿಸುವುದು ಪರಿಣಾಮಕಾರಿ. ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
ಈ ಎಲ್ಲಾ ನೈಸರ್ಗಿಕ ವಿಧಾನಗಳು ಶರೀರದ ತೂಕ ಇಳಿಸುವಿಕೆಗೆ ಸಹಾಯಕವಾದರೂ, ಆಹಾರ ನಿಯಂತ್ರಣ ಹಾಗೂ ನಿಯಮಿತ ವ್ಯಾಯಾಮವನ್ನು ಮರೆತುಬಿಡಬಾರದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)