ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಮಾತುಕತೆಯ ವೇದಿಕೆಯನ್ನು ಒದಗಿಸುವ ವ್ಯಾಟಿಕನ್ ಪ್ರಸ್ತಾಪವನ್ನು ಸ್ವಾಗತಿಸುವುದಾಗಿ ರಷ್ಯಾ ಸೋಮವಾರ ಹೇಳಿದೆ. ಆದರೆ ಉಕ್ರೇನ್ ನ ವಿಭಿನ್ನ ನಿಲುವುಗಳು ಮಾತುಕತೆಯನ್ನು ಅಸಾಧ್ಯವಾಗಿಸಿದೆ ಎಂದು ರಷ್ಯಾ ದೂರಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಮಧ್ಯಸ್ಥಿಕೆ ವಹಿಸಲು ಮತ್ತು ಅಂತ್ಯಗೊಳಿಸಲು ವ್ಯಾಟಿಕನ್ ಸಾಧ್ಯವಿರುವ ಎಲ್ಲವನ್ನೂ ಮಾಡಲು ಸಿದ್ಧವಾಗಿದೆ ಎಂದು ಪೋಪ್ ಫ್ರಾನ್ಸಿಸ್ 10 ದಿನಗಳ ಹಿಂದೆ ಇಟಾಲಿಯನ್ ದಿನಪತ್ರಿಕೆ ಲಾ ಸ್ಟಾಂಪಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ