ಹೊಸದಿಗಂತ ವರದಿ,ಕೊಪ್ಪಳ:
ಗೃಹ ಸಚಿವ ಡಾ.ಜಿ.ಪರಮೇಶ್ವರ ಮನೆಗೆ ಊಟಕ್ಕೆ ಹೋಗಿದ್ದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವುದು ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಟಕ್ಕೆ ಹೋದಾಗ ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆಯಾಗಿದೆ ಎಂದರು.
ದುಬೈ ಪ್ರವಾಸಕ್ಕೆ ಹೋಗುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು,ಶಾಸಕ ಹಾಗೂ ಮಾಜಿ ಶಾಸಕ ಮಿತ್ರರೊಂದಿಗೆ ನಾನು ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಈಗ ಹಾಲಿ ಶಾಸಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋದರೆ ದೊಡ್ಡ ಸುದ್ದಿಯಾಗುತ್ತದೆ. ಆದ್ದರಿಂದ ಕೆಲ ಮಾಜಿ ಶಾಸಕರನ್ನು ಮಾತ್ರ ದುಬೈಗೆ ಕರೆದುಕೊಂಡು ಹೋಗುವೆ ಎಂದರು.