ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ 20 ವಿಶ್ವಕಪ್ 2022 ರ ಫೈನಲ್ ಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಬುಧವಾರ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿದ್ದು, ನಾಳೆ ಇಂಗ್ಲೆಂಡ್ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಸೆಣೆಸಲಿದೆ.
ಇಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದರೆ, ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣೆಸಲಿದೆ.
ಹಾಗಾಗಿ, ಭಾರತ, ನಾವು ಮೆಲ್ಬೋರ್ನ್ ತಲುಪಿದ್ದೇವೆ ಮತ್ತು ಈಗ ನಾವು ನಿಮಗಾಗಿ ಕಾಯುತ್ತಿದ್ದೇವೆ. ನಿಮಗೆ ಶುಭ ಹಾರೈಸುತ್ತೇನೆ ಮತ್ತು ನೀವು ಮೆಲ್ಬೋರ್ನ್ ತಲುಪುತ್ತೀರಿ ಎಂದು ಭಾವಿಸುತ್ತೇವೆ. ನನಗೆ ಭಾರತ ಮತ್ತು ಪಾಕಿಸ್ತಾನದ ಫೈನಲ್ ಬೇಕು, ಮತ್ತೊಮ್ಮೆ ಅವರು ಪರಸ್ಪರ ಮುಖಾಮುಖಿಯಾಗುವುದನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ” ಎಂದು ಶೋಯೆಬ್ ಹೇಳಿದ್ದಾರೆ.
ಪಾಕಿಸ್ತಾನ ಉತ್ತಮವಾಗಿ ಆಡಿದೆ, ಫೈನಲ್ ತಲುಪಲು ಪ್ರಾರ್ಥನೆಗಳು ನೆರವಾಗಿವೆ. ನಾವು ಈ ಮೊದಲು ಈ ರೀತಿ ಕಂ ಬ್ಯಾಕ್ ಮಾಡಿದ್ದೇವೆ. ಪಾಕಿಸ್ತಾನ ಅದ್ಭುತವಾಗಿ ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಬೇಕಿತ್ತು ಮತ್ತು ಅವರು ಪಿಚ್ ಅನ್ನು ತಪ್ಪಾಗಿ ನಿರ್ಣಯಿಸಿದ್ದಾರೆ ಎಂದು ಪಂದ್ಯದ ಬಳಿಕ ತಿಳಿಸಿದರು.