ಟೀಮ್ ಇಂಡಿಯಾಗೆ 160 ರನ್​ಗಳ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಮೊದಲ ವಿಕೆಟ್​ಗೆ 55 ರನ್ ಪೇರಿಸಿದ ಬಳಿಕ ಮೇಯರ್ಸ್​ (25) ಅಕ್ಷರ್ ಪಟೇಲ್ ಎಸೆತದಲ್ಲಿ ಔಟಾದರು.ಆ ಬಳಿಕ ಬಂದ ಜಾನ್ಸನ್ ಚಾರ್ಲ್ಸ್​ 12 ರನ್​ಗಳಿಸಿ ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು. ಇನ್ನು ನಿಕೋಲಸ್ ಪೂರನ್ (20) ಕುಲ್ದೀಪ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.

42 ರನ್​ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಬ್ರಾಂಡನ್ ಕಿಂಗ್​ಗೂ ಕುಲ್ದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 17 ಓವರ್​ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ 123 ರನ್​ ಕಲೆಹಾಕಿತ್ತು.

ಕೊನೆಯ ಓವರ್​ನಲ್ಲಿ 11 ರನ್ ಬಾರಿಸುವ ಮೂಲಕ 19 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ನೊಂದಿಗೆ ಅಜೇಯ 40 ಬಾರಿಸಿದ ರೋವ್​ಮನ್ ಪೊವೆಲ್ ವೆಸ್ಟ್ ಇಂಡೀಸ್ ತಂಡದ ಮೊತ್ತವನ್ನು 5 ವಿಕೆಟ್​ ನಷ್ಟಕ್ಕೆ 159 ಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾಗೆ 160 ರನ್​ಗಳ ಟಾರ್ಗೆಟ್ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!