ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟರ್ ಸ್ಯಾಮ್ಯುಯೆಲ್ಸ್‌ಗೆ 6 ವರ್ಷಗಳ ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೆಸ್ಟ್ ಇಂಡೀಸ್ (West Indies) ತಂಡದ ಸ್ಟಾರ್ ಬ್ಯಾಟರ್ ಮರ್ಲಾನ್ ಸ್ಯಾಮ್ಯುಯೆಲ್ಸ್‌ಗೆ (Marlon Samuels) ಐಸಿಸಿ (ICC) 6 ವರ್ಷಗಳ ನಿಷೇಧ ಹೇರಿದೆ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಸ್ಯಾಮ್ಯುಯೆಲ್ಸ್‌ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ.

2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಸ್ಯಾಮ್ಯುಯೆಲ್ಸ್​ಗೆ ಈ ನಿಷೇಧದ ಶಿಕ್ಷೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಸ್ಯಾಮ್ಯುಯೆಲ್ಸ್‌ ಪ್ರಪಂಚದಾದ್ಯಂತದ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದರು. ಆದರೀಗ ಅವರು ಮುಂದಿನ 6 ವರ್ಷಗಳ ಕಾಲ ಯಾವುದೇ ಲೀಗ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.

2019 ರಲ್ಲಿ ನಡೆದ ಅಬುಧಾಬಿ ಟಿ10 ಲೀಗ್​ ಸಮಯದಲ್ಲಿ ಸ್ಯಾಮ್ಯುಯೆಲ್ಸ್, ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವುದು ಸಾಭೀತಾದ ಬಳಿಕ ಅವರಿಗೆ ಈ ನಿಷೇಧ ವಿಧಿಸಲಾಗಿದೆ. ಸೆಪ್ಟೆಂಬರ್ 2021 ರಲ್ಲಿ ಐಸಿಸಿ, ಸ್ಯಾಮ್ಯುಯೆಲ್ಸ್ ಅವರ ವಿರುದ್ಧ ನಾಲ್ಕು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿತ್ತು. ಆ ಬಳಿಕ ನಡೆದ ತನಿಖೆಯ ನಂತರ ಈ ವರ್ಷದ ಆಗಸ್ಟ್‌ನಲ್ಲಿ ಮರ್ಲಾನ್ ಸ್ಯಾಮ್ಯುಯೆಲ್ಸ್ ಅವರು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಇದೀಗ ಐಸಿಸಿ ನೀತಿ ಸಂಹಿತೆಯ ನಿಯಮಗಳಾದ 2.4.2, 2.4.3, 2.4.6 ಮತ್ತು 2.4.7 ರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ಸ್ ತಪ್ಪಿತಸ್ಥರೆಂದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!