ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನಿರೂಪಕಿ ಅಪರ್ಣಾ ನಿನ್ನೆಯಷ್ಟೇ ಶ್ವಾಸಕೋಶದ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದ್ದಾರೆ. ಕನ್ನಡದ ಕಂಚಿನ ಕಂಠದ ನಿರೂಪಕಿಯಾಗಿದ್ದ ಅಪರ್ಣಾ ಅವರನ್ನು ಇಡೀ ಕರುನಾಡು ನೆನಪು ಮಾಡಿಕೊಳ್ಳುತ್ತಿದೆ.
ಅಪರ್ಣಾ ಅವರ ಜತೆ ಐದು ವರ್ಷದಿಂದ ಒಂದೇ ಶೋ ಮಜಾ ಟಾಕೀಸ್‌ನಲ್ಲಿ ಸಹನಟನಾಗಿ ಅಭಿನಯಿಸಿದ ಮಂಡ್ಯ ರಮೇಶ್ ಅವರ ಭಾವುಕರಾಗಿದ್ದಾರೆ.
ಕನ್ನಡ ಅಂದರೆ ಅಪರ್ಣ ಅಪರ್ಣಾ ಅಂದರೆ ಕನ್ನಡ ಅಂತ ಮಾತಿದೆ. ಅವರ ಕನ್ನಡ ಪ್ರೀತಿ ಮಾಡಿದ ದೊಡ್ಡ ಜನ ಸಮೂಹವಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತದೆ. 5 ವರ್ಷ ಮಜಾ ಟಾಕೀಸ್ ಮೂಲಕ ಇವರ ಜೊತೆ ಒಡನಾಟ ನಮ್ಮದು. ಎಲ್ಲರನ್ನೂ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಅಪರ್ಣಾ. ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಅಂತ ಗೊತ್ತಿರಲಿಲ್ಲ, ಸಾವು ಅಂದ್ರೇನೇ ಹಾಗಲ್ವಾ? ಆಕೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.