ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕ್ಸಿಯಮ್ -4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ 39 ವರ್ಷದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ,ಇಂದು ಕಕ್ಷೆಯಿಂದ ತನ್ನ ಮೊದಲ ಸಂದೇಶ ಕಳುಹಿಸಿದ್ದಾರೆ.
ಸ್ಪೇಸ್ ಕ್ರಾಪ್ಟ್ ನ ಡ್ರ್ಯಾಗನ್ ನಿಂದ ಮಾತನಾಡಿರುವ ಶುಕ್ಲಾ, ‘ದೇಶವಾಸಿಗಳಿಗೆ ನಮಸ್ಕಾರ’ ಎಂದು ಹೇಳುವ ಮೂಲಕ ದೇಶಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬಳಿಕ ಫಾಲ್ಕನ್ 9 ರಾಕೆಟ್ ಪ್ರಯಾಣ ಕುರಿತು ವಿವರಿಸಿದ್ದು, What a ride! ಎಂದು ಉದ್ಗರಿಸಿದ್ದಾರೆ. ಪ್ರಯಾಣ ಆರಂಭವಾದಾಗ, ನಿಮ್ಮ ಸೀಟಿಗೆ ಇದ್ದಕ್ಕಿದ್ದಂತೆ ನೂಕಲ್ಪಟ್ಟಂತೆ ಅನುಭವಾಗುತ್ತದೆ. ಬೇರೆನೂ ಇಲ್ಲ. ನಿರ್ವಾತದಲ್ಲಿ ತೇಲುತ್ತಿರುತ್ತೀರಿ ಎಂದು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಹೇಗೆ ನಡೆಯಬೇಕು ಮತ್ತು ತಿನ್ನಬೇಕು ಎಂಬುದರ ಬಗ್ಗೆ ಮಗುವಿನಂತೆ ಕಲಿಯುತ್ತಿದ್ದೇನೆ ಎಂದು ಅವರು ಅಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವ ಸವಾಲು ಕುರಿತು ಮಾತನಾಡಿದ್ದಾರೆ.
Watch live as the Ax-4 astronauts check in from orbit https://t.co/nn1GXw6JdQ
— SpaceX (@SpaceX) June 26, 2025