ನಮ್ಮ ಜೀವನದಲ್ಲಿ ಯಾವುದೊ ಒಂದು ಕಾರಣಕ್ಕೆ ನಿರ್ದಿಷ್ಟ ಸಂಖ್ಯೆಗಳನ್ನು ಮತ್ತೆ ಮತ್ತೆ ಕಾಣಿಸುತ್ತೇವೆ. ಉದಾಹರಣೆಗೆ 111, 222, 777 ಮುಂತಾದವು. ಇವುಗಳನ್ನು ನಾವು ಸರಾಸರಿ ಸಂಖ್ಯೆಗಳೆಂದು ಎಣಿಸಬಹುದು, ಆದರೆ ಸ್ಪಿರಿಚುವಲ್ ಜಗತ್ತಿನಲ್ಲಿ ಈ ಸಂಖ್ಯೆಗಳಿಗೊಂದು ವಿಶೇಷ ಮಹತ್ವವಿದೆ. ಇವುಗಳನ್ನು Angel Numbers ಎನ್ನುತ್ತಾರೆ. ಈ ನಂಬರ್ ಗಳನ್ನು ದೇವತೆಗಳು ಅಥವಾ ಬ್ರಹ್ಮಾಂಡದಿಂದ ಬರುವ ಸಂಜ್ಞೆಗಳೆಂದು ಕೆಲವರು ನಂಬುತ್ತಾರೆ. ಈ ಸಂಖ್ಯೆಗಳ ಮೂಲಕ ಆತ್ಮಸಾಕ್ಷಾತ್ಕಾರ, ಮಾರ್ಗದರ್ಶನ ಅಥವಾ ಎಚ್ಚರಿಕೆಯ ಸಂದೇಶಗಳು ನಮಗೆ ಬರುತ್ತವೆ ಎನ್ನುವುದು ನಂಬಿಕೆ.
ಏಂಜೆಲ್ ನಂಬರ್ ಗಳು ಅಂದ್ರೇನು?
ಇವು ಪುನರಾವರ್ತನೆಯಲ್ಲಿರುವ ಸಂಖ್ಯೆಗಳಾಗಿವೆ (ಹೆಚ್ಚಾಗಿ ಮೂರು ಅಥವಾ ನಾಲ್ಕು ಅಂಕಿಗಳ), ಉದಾ: 111, 333, 1212. ಈ ಸಂಖ್ಯೆಗಳು ವ್ಯಕ್ತಿಯ ಜೀವನದಲ್ಲಿ ನಿರ್ದಿಷ್ಟ ಘಟ್ಟದಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಇದು ಎಚ್ಚರಿಕೆಯ ಸಂಕೇತ, ಪ್ರೋತ್ಸಾಹ ಅಥವಾ ಮಾರ್ಗದರ್ಶನವೂ ಆಗಿರಬಹುದು. ಸ್ಪಿರಿಚುವಲ್ ನಂಬಿಕೆಯ ಪ್ರಕಾರ, ಇವು ದೇವದೂತರಿಂದ ಬರುವ ಸಹಾಯದ ಸೂಚನೆಗಳು ಎಂಬ ನಂಬಿಕೆ ಇದೆ.
ಜನರು ಏಕೆ ನಂಬುತ್ತಾರೆ?
ವೈಯಕ್ತಿಕ ಅನುಭವ: ಹಲವರು ತಮ್ಮ ಜೀವನದಲ್ಲಿ ಏಂಜೆಲ್ ನಂಬರ್ ಗಳು ಮರುಕಳಿಕೆಗೆ ಅನುಗುಣವಾಗಿ ಘಟನೆಗಳು ಸಂಭವಿಸುತ್ತವೆ ಎಂದು ನಂಬುತ್ತಾರೆ. ಇದು ಆ ನಂಬಿಕೆಗೆ ಬಲ ನೀಡುತ್ತದೆ.
ಶಾಂತಿ ಮತ್ತು ಧೈರ್ಯ: ಸಂಕಷ್ಟದ ವೇಳೆಯಲ್ಲಿ ಈ ನಂಬರ್ ಗಳನ್ನು ನೋಡುವುದು ಹಲವರಿಗೆ ಧೈರ್ಯ ನೀಡುತ್ತದೆ. ದೇವರ ಮಾರ್ಗದರ್ಶನವಿದೆ ಎಂಬ ಭರವಸೆ ತಾಳ್ಮೆಯನ್ನು ಹುಟ್ಟಿಸುತ್ತದೆ.
ಅರ್ಥ ಹುಡುಕುವ ಮನಸ್ಥಿತಿ: ಕೆಲವರು ತಮ್ಮ ಜೀವನದ ಗೊಂದಲಗಳಿಗೆ ಉತ್ತರ ಹುಡುಕುತ್ತಿರುವಾಗ, ಈ ನಂಬರ್ ಗಳು ದಾರಿ ತೋರಿಸುತ್ತವೆ ಎನ್ನುವ ನಂಬಿಕೆ ಹೊಂದಿರುತ್ತಾರೆ.
ಸಂಖ್ಯಾ ಶಾಸ್ತ್ರದ ಪ್ರಭಾವ: ನ್ಯೂಮರಾಲಜಿ ಅಥವಾ ಸಂಖ್ಯಾ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಗೆ ವಿಶಿಷ್ಟ ಶಕ್ತಿ ಮತ್ತು ಅರ್ಥವಿದೆ. ಈ ಶಾಸ್ತ್ರವನ್ನು ನಂಬುವವರು ಈ ಸಂಖ್ಯೆಗಳ ಹಿನ್ನೆಲೆಯ ಅರ್ಥವನ್ನು ತೀವ್ರವಾಗಿ ನಂಬುತ್ತಾರೆ.
ಸ್ಪಿರಿಚುವಲ್ ಸಮುದಾಯದ ಪ್ರಭಾವ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಿರಿಚುವಲ್ ವಿಷಯಗಳ ಪ್ರಭಾವ ಹೆಚ್ಚಾಗಿರುವ ಕಾರಣ, ಏಂಜೆಲ್ ನಂಬರುಗಳ ಕುರಿತು ಹೆಚ್ಚು ಜನರಿಗೆ ಅರಿವು ಬಂದಿದೆ. ಈ ನಂಬಿಕೆ ಬಹುಪಾಲು ಜನರಲ್ಲಿ ಒತ್ತಡ-ಮುಕ್ತ ಜೀವನದ ಭರವಸೆ ಕೊಡುತ್ತದೆ.
ಒಟ್ಟಿನಲ್ಲಿ ಏಂಜೆಲ್ ನಂಬರ್ ಗಳು ಒಂದು ಆಧ್ಯಾತ್ಮಿಕ ನಂಬಿಕೆ, ಇದು ನವಚೇತನ, ಧೈರ್ಯ, ಮತ್ತು ಮಾರ್ಗದರ್ಶನವನ್ನು ಜೀವನದಲ್ಲಿ ಒದಗಿಸುತ್ತವೆ ಎನ್ನುವ ಭರವಸೆಯಿಂದ ರೂಪುಗೊಂಡಿದೆ. ವೈಜ್ಞಾನಿಕ ಸಾಬೀತಾಗದಿದ್ದರು, ಇವು ವ್ಯಕ್ತಿಯ ಒಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ರೀತಿಯಂತಿದೆ.