ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದ್ದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಸೇರಿದಂತೆ ಹಲವರು 242 ಮಂದಿ ಮೃತಪಟ್ಟಿದ್ದಾರೆ.
ಭಾರತದಲ್ಲಿ ಈ ರೀತಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ದುರಂತಗಳು ಸಂಭವಿಸಿದ್ದವು. ಈ ಬಗ್ಗೆ ಮಾಹಿತಿ ಇಲ್ಲಿದೆ.
2020ರ ಆಗಸ್ಟ್ 7: ಕ್ಯಾಲಿಕಟ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ದುಬೈ-ಕೋಯಿಕ್ಕೋಡ್ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ 18 ಜನ ಮೃತಪಟ್ಟಿದ್ದರು.
2010ರ ಮೇ 22: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ದುಬೈ-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದರು.
2000ರ ಜುಲೈ 17: ಅಲಯನ್ಸ್ ಏರ್ ವಿಮಾನ 7412 ಪಟ್ನಾದ ವಸತಿ ಪ್ರದೇಶದಲ್ಲಿ ಪತನವಾಗಿ 60 ಜನ ಮೃತಪಟ್ಟಿದ್ದರು.
1996ರ ನವೆಂಬರ್ 12: ಹರಿಯಾಣದ ಚಕ್ರಿಡಬ್ರಿ ಬಳಿ ಆಗಸದಲ್ಲಿ ಸೌದಿ ಅರೇಬಿಯಾದ ವಿಮಾನ ಮತ್ತು ಕಜಕಿಸ್ತಾನದ ವಿಮಾನ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಿಮಾನದಲ್ಲಿದ್ದ 349 ಜನ ಮೃತಪಟ್ಟಿದ್ದರು.
1993ರ ಏಪ್ರಿಲ್ 26: ಇಂಡಿಯನ್ ಏರ್‌ಲೈನ್ಸ್ ವಿಮಾನ ಔರಂಗಾಬಾದ್‌ನಲ್ಲಿ ಟೇಕ್‌ಆಫ್ ಆಗುವಾಗ ರನ್‌ವೇನಲ್ಲಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 55 ಜನ ಮೃತಪಟ್ಟಿದ್ದರು.
1991ರ ಆಗಸ್ಟ್ 16: ಇಂಫಾಲದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 69 ಜನ ಮೃತಪಟ್ಟಿದ್ದರು.
1990ರ ಫೆಬ್ರುವರಿ 14: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 92 ಜನ ಮೃತಪಟ್ಟಿದ್ದರು.
1988ರ ಅಕ್ಟೋಬರ್ 19: ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 133 ಜನ ಮೃತಪಟ್ಟಿದ್ದರು.
1982ರ ಜೂನ್ 21: ಬಾಂಬೆಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 17 ಜನ ಸಾವನ್ನಪ್ಪಿದ್ದರು.
1978ರ ಜನವರಿ 1: ಬಾಂದ್ರಾದ ಕರಾವಳಿ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 213 ಜನ ಮೃತಪಟ್ಟಿದ್ದರು.