ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ಥೈರ್ಯ ನೀಡುವುದು ಇಂದು ಅಗತ್ಯವಾಗಿದೆ. ಹಲವಾರು ಕುಟುಂಬಗಳಲ್ಲಿ ಮಹಿಳೆಯರು ಗೃಹಿಣಿಯರಾಗಿ ತಮ್ಮ ಪಾತ್ರ ನಿರ್ವಹಿಸುತ್ತಾರೆ, ಆದರೆ ಆರ್ಥಿಕ ನಿರ್ಧಾರಗಳಲ್ಲಿ ಅವರ ಹೆಸರು ಕಾಣಿಸೋದು ಕಡಿಮೆ. ಇದರಿಂದ ಅವರು ಯಾವುದೇ ಆಸ್ತಿ ಅಥವಾ ಹಣಕಾಸು ವ್ಯವಹಾರಗಳಲ್ಲಿ ಪಾಲುದಾರರಾಗದೇ ಉಳಿಯುತ್ತಾರೆ.
ಆದರೆ, ನಿಮ್ಮ ಹೆಂಡತಿಯ ಹೆಸರಿನಲ್ಲಿ ಆಸ್ತಿ ಅಥವಾ ಹೋಮ್ ಲೋನ್ ತೆಗೆದುಕೊಳ್ಳುವುದರಿಂದ ನಿಮಗೆ ಮಾತ್ರವಲ್ಲ, ಅವರಿಗೂ ಹಿತಕರವಾದ ಅನೇಕ ಆರ್ಥಿಕ ಪ್ರಯೋಜನಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸ್ವಾಯತ್ತತೆಯನ್ನು ಉತ್ತೇಜಿಸಲು ಹಲವು ರಿಯಾಯಿತಿಗಳನ್ನು ನೀಡುತ್ತವೆ. ಸ್ಟಾಂಪ್ ಡ್ಯೂಟಿ ವಿನಾಯಿತಿ, ಕಡಿಮೆ ಬಡ್ಡಿ ದರ, ತೆರಿಗೆ ಉಳಿತಾಯ ಮುಂತಾದ ಅನೇಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡರೆ, ನಿಮ್ಮ ಕುಟುಂಬದ ಆರ್ಥಿಕ ಭದ್ರತೆ ಹೆಚ್ಚಿಸುವ ಸಾಧ್ಯತೆ ಇದೆ.
ಈ ಲೇಖನದಲ್ಲಿ, ಗಂಡ-ಹೆಂಡತಿ ಜಂಟಿಯಾಗಿ ಹೋಮ್ ಲೋನ್ ತೆಗೆದುಕೊಳ್ಳುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳನ್ನು ತಿಳಿದುಕೊಳ್ಳೋಣ!
ಜಾಯಿಂಟ್ ಹೋಮ್ ಲೋನ್
ಹೆಂಡತಿ ಜೊತೆ ಸೇರಿ ನೀವು ಜಾಯಿಂಟ್ ಹೋಮ್ ಲೋನ್ ತಗೊಂಡ್ರೆ ಇದರ ಎಫೆಕ್ಟ್ ನಿಮ್ಮ ಇಎಂಐ ಮೇಲೆ ಆಗುತ್ತೆ. ಹೆಂಡತಿ ಕೋ-ಅಪ್ಲಿಕೆಂಟ್ ಆದ್ರೆ ನಿಮಗೆ ಲೋನ್ ಕಡಿಮೆ ಬಡ್ಡಿಗೆ ಸಿಗುತ್ತೆ. ಕಡಿಮೆ ರೇಟ್‌ಗೆ ಲೋನ್ ಸಿಕ್ಕರೆ ಅದರ ಮಂತ್ಲಿ ಕಂತು ಕೂಡ ಕಡಿಮೆ ಇರುತ್ತೆ.
ಟ್ಯಾಕ್ಸ್‌ನಲ್ಲಿ ದೊಡ್ಡ ಮೊತ್ತ ಉಳಿತಾಯ
ಜಾಯಿಂಟ್ ಹೋಮ್ ಲೋನ್ ತಗೊಳ್ಳೋದ್ರಿಂದ ಇನ್ಕಮ್ ಟ್ಯಾಕ್ಸ್‌ನಲ್ಲಿ ಕೂಡ ದೊಡ್ಡ ರಿಲೀಫ್ ಇರುತ್ತೆ. ಇದರಿಂದ ಇಬ್ಬರೂ ಬೇರೆ ಬೇರೆಯಾಗಿ ಇನ್ಕಮ್ ಟ್ಯಾಕ್ಸ್ ಬೆನಿಫಿಟ್ ಪಡ್ಕೊಬಹುದು.
ಲೋನ್ ಲಿಮಿಟ್
ಸಿಂಗಲ್ ಲೋನ್ ಅಪ್ಲಿಕೆಂಟ್‌ಗೆ ಅವರವರ ಆದಾಯದ ಪ್ರಕಾರ ಲಿಮಿಟೆಡ್ ಲೋನ್ ಮಾತ್ರ ಸಿಗುತ್ತೆ, ಆದ್ರೆ ಜಾಯಿಂಟ್ ಅಪ್ಲಿಕೆಂಟ್ ಆದ್ರೆ ಇಬ್ಬರ ಟೋಟಲ್ ಇನ್ಕಮ್ ನೋಡ್ತಾರೆ. ಇದರಿಂದ ನೀವು ಜಾಸ್ತಿ ಲೋನ್ ತಗೋಬಹುದು. .
ಕ್ರೆಡಿಟ್ ಸ್ಕೋರ್
ಜಾಯಿಂಟ್ ಹೋಮ್ ಲೋನ್ ತಗೊಂಡ ಮೇಲೆ ಟೈಮ್‌ಗೆ ಇಎಂಐ ಕಟ್ಟಿದ್ರೆ ಇಬ್ಬರ ಕ್ರೆಡಿಟ್ ಸ್ಕೋರ್ ಚೆನ್ನಾಗಿರುತ್ತೆ. ಇದು ನಿಮಗೆ ಮುಂದೆ ಮುಂದೆ ಲೋನ್ ತಗೋಳೋಕೆ ಸಹಾಯ ಮಾಡುತ್ತೆ.