ಹಿಂದೆಲ್ಲಾ ವಯಸ್ಸಾದ ಮೇಲೆ ಡಯಾಬಿಟಿಸ್ ಕಾಡುತ್ತಿತ್ತು. ಆದರೆ ಇದೀಗ ೩೦ರ ವಯಸ್ಸಿನಲ್ಲಿಯೇ ಡಯಾಬಿಟಿಸ್ ಸಮಸ್ಯೆ ಜನರನ್ನು ಕಾಡುತ್ತಿದೆ. ಯುವ ಪೀಳಿಗೆಯೇ ಡಯಾಬಿಟಿಸ್‌ಗೆ ತುತ್ತಾಗುತ್ತಿದ್ದು, ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಡಯಾಬಿಟಿಸ್ ಬಂದಿದೆ ಎಂದು ತಿಳಿಯೋದು ಹೇಗೆ? ಯಾವ ಲಕ್ಷಣಗಳಿವೆ ನೋಡಿ..
- ಹೆಚ್ಚು ಮೂತ್ರ ವಿಸರ್ಜನೆ, ಅದರಲ್ಲಿಯೂ ರಾತ್ರಿ ಸಮಯವೇ ವಾಶ್‌ರೂಂಗೆ ಪದೇ ಪದೆ ಹೋಗೋಣ ಎನಿಸುತ್ತದೆ.
- ಯಾವಾಗಲೂ ಬಾಯಾರಿಕೆ, ಈಗಷ್ಟೇ ನೀರು ಕುಡಿದರೂ ಮತ್ತೆ ನೀರು ಬೇಕು ಎನಿಸುತ್ತದೆ.
- ಸ್ವಲ್ಪವೂ ಪ್ರಯತ್ನ ಇಲ್ಲದೆ ತೂಕ ಇಳಿಕೆ
- ದೃಷ್ಟಿ ಮಂಜು ಮಂಜಾದಂತೆ ಅನಿಸುವುದು
- ಮೈ ಕೈ ಜೊವು ಹಿಡಿಯುವುದು
- ಯಾವಾಗಲೂ ಸುಸ್ತು ಎನಿಸುವುದು
- ಚರ್ಮ ಒಣಗುವುದು
- ಗಾಯಗಳು ಬೇಗ ವಾಸಿಯಾಗೋದಿಲ್ಲ
- ಮಾಮೂಲಿಗಿಂತ ಹೆಚ್ಚೇ ಇನ್ಫೆಕ್ಷನ್‌ಗಳಿಗೆ ತುತ್ತಾಗೋದು.
ಯಾವುದೇ ಲಕ್ಷಣಗಳು ಕಾಣಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ