ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಮಾರಸ್ವಾಮಿಯವರು ನಕಲಿ ಕೆಲಸ ಮಾಡಲ್ಲ, ಅವರು ಸಾಚ ಕೆಲಸ ಮಾಡೋರು. ಆದರೆ ಅವರ ಸಹಿ ಫೋರ್ಜರಿ ಎಂದಿದ್ದಾರೆ. ಆದರೂ ಏಕೆ ದೂರು ಕೊಟಿಲ್ಲ? ಈಗಲಾದ್ರೂ ದೂರು ಕೊಡಿ ಎಂದು ಕುಮಾರಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನದ್ದು ಸಹಿ ಅಲ್ಲದೆ ಹೋಗಿದ್ರೆ ನೀನು ಏಕೆ ಕೋರ್ಟ್‍ಗೆ ಹೋಗಿದ್ದೀಯಾ? ಮಾಧ್ಯಮದ ಮುಂದೆ ಏಕೆ ಸುಳ್ಳು ಹೇಳ್ತಾ ಇದ್ದೀಯಾ? ನೀನು ಕೇಂದ್ರ ಸಚಿವ, ಸಂವಿಧಾನದ ಬದ್ಧವಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಸತ್ಯ ಹೇಳಬೇಕು ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.