ನನಗೆ ನಾಲ್ಕು ಗಂಟೆ ನಿದ್ದೆ ಇದ್ದರೂ ಸಾಕು ನಾನು ಹಾಯಾಗಿ ಇರ್ತೇನೆ, ರಾತ್ರಿಯಿಡೀ ಪಾರ್ಟಿ ಮಾಡಿದ್ರೂ ಬೆಳಗ್ಗೆ ಫ್ರೆಶ್ ಆಗಿ ಇರ್ತೀನಿ ಎನ್ನುವ ಜನ ಸಾಕಷ್ಟಿದ್ದಾರೆ. ಆದರೆ ಹೀಗೆ ಮಾಡೋದು ನಿಮ್ಮ ಆರೋಗ್ಯಕ್ಕೆ ಏನು ಮಾಡುತ್ತದೆ? ಇದರ ಬಗ್ಗೆ ಆಲೋಚಿಸಿ, ದಿನವಿಡೀ ನಿಮ್ಮ ದೇಹದ ಪ್ರತಿ ಅಂಗವೂ ಕೆಲಸ ಮಾಡಿ ದಣಿದಿರುತ್ತದೆ. ಅದಕ್ಕೆ ರೆಸ್ಟ್ ಬೇಕಲ್ವಾ? ನೀವು ದಣಿದು ಎಷ್ಟು ದಿನ ಅದೇ ಎನರ್ಜಿ ಉಳಿಸಿಕೊಳ್ಳಲು ಸಾಧ್ಯ? ರಾತ್ರಿ ಹತ್ತರಿಂದ ಬೆಳಗ್ಗೆ ಆರರವರೆಗೂ ನಿದ್ದೆ ಮಾಡಿ.. ಯಾಕೆ ನೋಡಿ..
ಸಾಕಷ್ಟು ನಿದ್ರೆ ಮಾಡದಿರುವುದು ಗಮನ, ಏಕಾಗ್ರತೆ ಮತ್ತು ದೀರ್ಘಾವಧಿಯಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ನೀವು ಉತ್ತಮ ನಿದ್ರೆಯನ್ನು ಪಡೆಯಲು ಬಯಸಿದರೆ, ನಿಮ್ಮ ನಿದ್ರೆಯ ಅಭ್ಯಾಸಗಳನ್ನು ಸುಧಾರಿಸಲು ಪ್ರಯತ್ನಿಸಿ, ಉದಾಹರಣೆಗೆ ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುವುದು, ಮಲಗುವ ಕೋಣೆಯನ್ನು ಆರಾಮದಾಯಕವಾಗಿಡುವುದು ಮತ್ತು ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.
ಮಲಗುವ ಕೋಣೆಗೆ ನಿಮ್ಮ ಶತ್ರುವಾದ ಫೋನ್‌ನ್ನು ತೆಗೆದುಕೊಂಡು ಹೋಗಬೇಡಿ. ಇದು ನಿಮ್ಮನ್ನು ಮಲಗೋದಕ್ಕೆ ಬಿಡೋದಿಲ್ಲ.
ಮತ್ಯಾಕೆ ತಡ? ಫೋನ್ ತೆಗೆದಿಟ್ಟು ನಿದ್ದೆಗೆ ಜಾರಿ..
ಶುಭರಾತ್ರಿ