ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪರಾಷ್ಟ್ರಪತಿಯವರನ್ನು ಅನುಕರಣೆ ಮಾಡಿ ಇಡೀ ದೇಶದಲ್ಲಿ ಚರ್ಚೆಯಾಗುವಂತೆ ಮಾಡಿದ್ದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಅಣಕ ಮಾಡಿದ್ದಾರೆ.
ಅನುಕರಣೆ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಬ್ಯಾನರ್ಜಿ ಅನುಕರಣೆ ಮಾಡೋದು ಒಂದು ಕಲೆ, ಅದನ್ನು ಅರ್ಥ ಮಾಡಿಕೊಳ್ಳದಿದ್ರೆ ನಾನೇನು ಮಾಡಲಿ. ಸುಮ್ಮನೆ ನನ್ನನ್ನು ಗುರಿಯಾಗಿಸಿದರೆ ನಾನು ಅಸಹಾಯಕ ಎಂದು ಉಪರಾಷ್ಟ್ರಪತಿ ಹೆಸರು ಉಲ್ಲೇಖಿಸದೆ ಅಣಕ ಮಾಡಿದ್ದಾರೆ.