COLOR ASTRO | ಒಳ್ಳೆಯದಾಗೋಕೆ ವಾರದ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಇಲ್ಲಿದೆ ಲಿಸ್ಟ್

ಪ್ರತಿದಿನವೂ ಒಂದೊಂದು ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದರಿಂದಾಗಿ ಯಶಸ್ಸು ನಿಮ್ಮದಾಗುತ್ತದೆ. ಯಾವ ದಿನದಂದು ಯಾವ ಬಟ್ಟೆ? ಇಲ್ಲಿದೆ ಮಾಹಿತಿ..

ಭಾನುವಾರ: ಎಲ್ಲರಿಗೂ ಗೊತ್ತಿರುವಂತೆ ಭಾನುವಾರವನ್ನ ಗ್ರಹಗಳ ರಾಜ ಸೂರ್ಯ ಆಳುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ದಿನದ ಅದೃಷ್ಟದ ಬಣ್ಣ ಕೆಂಪು ಎನ್ನಲಾಗುತ್ತದೆ. ಭಾನುವಾರದಂದು, ರೋಮಾಂಚಕ ಕೆಂಪು ಬಣ್ಣಗಳ ಬಟ್ಟೆ ಧರಿಸಿ ಮತ್ತು ಸೂರ್ಯನ ಶಕ್ತಿಯನ್ನ ನೀವು ಪಡೆಯಬಹುದು. ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನ ಧರಿಸುವುದರಿಂದ ಸೂರ್ಯನಿಗೆ ಸಂಬಂಧಿಸಿದ ದೋಷಗಳಿಂದ ಪರಿಹಾರ ಸಿಗಲಿದೆ.

ಸೋಮವಾರ: ಈ ಸೋಮವಾರವನ್ನ ಚಂದ್ರ ಗ್ರಹ ಆಳುತ್ತದೆ ಎನ್ನುವ ನಂಬಿಕೆ ಇದೆ. ಈ ದಿನದ ಅದೃಷ್ಟದ ಬಣ್ಣ ಬಿಳಿಯಾಗಿದೆ. ಇನ್ನು ಈ ದಿನ ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸಲು ಮುತ್ತುಗಳ ಆಭರಣ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನ ಧರಿಸುವುದು ಸೂಕ್ತ ಎನ್ನಲಾಗುತ್ತದೆ. ಇದರಿಂದ ಚಂದ್ರನ ದೋಷ ನಿವಾರಣೆ ಆಗುತ್ತದೆ ಹಾಗೂ ಶಿವನ ಕಾರಣದಿಂದ ನಿಮ್ಮ ಕಷ್ಟಗಳು ಸಹ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಇದೆ.

ಮಂಗಳವಾರ: ಈ ಮಂಗಳವಾರವನ್ನ ಗ್ರಹಗಳ ಕಮಾಂಡರ್ ಮಂಗಳ ಆಳುತ್ತದೆ. ಈ ದಿನದ ಅದೃಷ್ಟದ ಬಣ್ಣ  ಕಿತ್ತಳೆ, ಕೆಂಪು ಬಣ್ಣ ಎನ್ನಲಾಗುತ್ತದೆ. ಕೆಂಪು ಬಣ್ಣವು ಭಾನುವಾರದಂತೆಯೇ ಮಂಗಳವಾರ ಧರಿಸಲೂ ಸಹ ಸೂಕ್ತವಾಗಿದೆ. ಈ ದಿನದಂದು ಕಿತ್ತಳೆ ಬಣ್ಣವನ್ನು ಧರಿಸುವುದರಿಂದ ನಿಮಗೆ ಅದೃಷ್ಟ ಕೂಡ ಬರುತ್ತದೆ. ಅಲ್ಲದೇ, ಇದರಿಂದ ಕುಜ ದೋಷದಿಂದ ಮುಕ್ತಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಗೆ ಸಹ ಈ ಮಂಗಳ ಪರಿಹಾರ ಕೊಡುವ ಕಾರಣದಿಂದ ನೀವು ಮಂಗಳವಾರ ಕಿತ್ತಳೆ ಹಾಗೂ ಕೆಂಪು ಬಣ್ಣದ ಬಟ್ಟೆಗಳನ್ನ ಧರಿಸಿ.

ಬುಧವಾರ: ಈ ಬುಧವಾರವನ್ನ ಗ್ರಹಗಳ ರಾಜಕುಮಾರ ಬುಧ ಆಳುತ್ತದೆ. ಈ ದಿನದ ಅದೃಷ್ಟದ ಬಣ್ಣ ಹಸಿರಾಗಿದೆ. ಸಾಮಾನ್ಯವಾಗಿ ಬುಧವಾರ ಹಸಿರು ಬಣ್ಣವನ್ನ ಧರಿಸಬೇಕು ಎನ್ನಲಾಗುತ್ತದೆ. ಈ ದಿನ ಹಸಿರು ಬಣ್ಣವನ್ನು ಪ್ರತಿನಿಧಿಸುವುದರಿಂದ ಬುಧವಾರದಂದು ಯಾವುದಾದರೂ ಶೇಡ್​ನ ಹಸಿರು ಬಣ್ಣವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಜಾತಕದಲ್ಲಿ ಬುಧ ದೋಷ ಇದ್ದರೆ ಅದು ಬುದ್ದಿವಂತಿಕೆ ಹಾಗೂ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಈ ದೋಷದ ಪರಿಣಾಮಗಳನ್ನ ಕಡಿಮೆ ಮಾಡಲು ಬುಧವಾರ ಹಸಿರು ಬಣ್ಣದ ಬಟ್ಟೆಗಳನ್ನ ಧರಿಸಬೇಕು.

ಗುರುವಾರ: ಈ ವಾರವನ್ನ ಬೃಹಸ್ಪತಿ ಗುರು ಆಳುತ್ತದೆ. ಈ ದಿನದ ಅದೃಷ್ಟದ ಬಣ್ಣ ಹಳದಿಯಾಗಿದೆ. ನಿಮ್ಮ ಅದೃಷ್ಟದ ಬಾಗಿಲು ತೆರೆಯಲು ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ಸೌಮ್ಯವಾದ ಮತ್ತು ಬೆರಗುಗೊಳಿಸುವ ಬಣ್ಣವನ್ನು ಧರಿಸುವ ಮೂಲಕ ನೀವು ನಿಮ್ಮ ಬದುಕನ್ನ ಬದಲಾಯಿಸಬಹುದು. ಅಲ್ಲದೇ, ಗುರುಬಲ ಇದ್ದರೆ ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ.

ಶುಕ್ರವಾರ: ಈ ದಿನದ ಆಡಳಿತ ಗ್ರಹ ಶುಕ್ರ. ಈ ದಿನದ ಅದೃಷ್ಟ ಬಣ್ಣ – ಗುಲಾಬಿ, ಲ್ಯಾವೆಂಡರ್, ಬಿಳಿ ಎನ್ನಲಾಗುತ್ತದೆ. ಶುಕ್ರನನ್ನು ಮೆಚ್ಚಿಸಲು ಗುಲಾಬಿ, ಲ್ಯಾವೆಂಡರ್ ಮತ್ತು ಬಿಳಿ ಬಣ್ಣಗಳನ್ನು ಧರಿಸಿದರೆ ಒಳ್ಳೆಯದು.

ಶನಿವಾರ: ಈ ವಾರದ ಆಡಳಿತ ಗ್ರಹ – ಶನಿ. ಈ ದಿನದ ಅದೃಷ್ಟದ ಬಣ್ಣ ಕಪ್ಪು, ಗಾಢ ನೀಲಿ ಎನ್ನಲಾಗುತ್ತದೆ. ಶನಿ ಗ್ರಹವು ಕಪ್ಪು ಮತ್ತು ಆಳವಾದ ನೀಲಿ ಬಣ್ಣಗಳನ್ನ ಇಷ್ಟಪಡುತ್ತದೆ, ಹಾಗಾಗಿ ಶನಿವಾರದಂದು ಈ ಕಪ್ಪು ವರ್ಣಗಳನ್ನು ಧರಿಸಿ ಇದರಿಂದ ನೀವು ಶನಿಗ್ರಹದಿಂದ ಲಾಭ ಸಿಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!