ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಂಜಯ್ ದತ್ ‘ಕೆಜಿಎಫ್ 2’ನಲ್ಲಿ ಅಧೀರನಾಗಿ ಗಮನ ಸೆಳೆಯುವ ಮೂಲಕ ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಅಭಿನಯದ ‘ಕೆಡಿ’ ಸಿನಿಮಾ ಮೂಲಕ ಮತ್ತೆ ದಕ್ಷಿಣಕ್ಕೆಎಂಟ್ರಿ ಪಡೆದಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗೆ ನಡೆದಿದ್ದು, ಸಂಜಯ್ ದತ್ ಕೂಡ ಆಗಮಿಸಿದ್ದರು. ಈ ವೇಳೆ ಮಾತನಾಡುತ್ತಾ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿ ವ್ಯಕ್ತಪಡಿಸಿದ್ದಾರೆ.
‘ನಾನು ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದೇನೆ. ನನಗೆ ರಾಜಮೌಳಿ ಒಳ್ಳೆಯ ಗೆಳೆಯ. ದಕ್ಷಿಣ ಭಾರತದಲ್ಲಿ ಮಾಡುವ ಸಿನಿಮಾಗಳಲ್ಲಿ ಸಾಕಷ್ಟು ಎನರ್ಜಿ, ಪ್ರೀತಿ ಹಾಗೂ ಪ್ಯಾಷನ್ ಕಾಣುತ್ತದೆ. ಇಲ್ಲಿನವರು ಹೀರೋಯಿಸಂ ಅನ್ನು ಸೆಲೆಬ್ರೇಟ್ ಮಾಡುತ್ತಾರೆ’ ಎಂದಿದ್ದಾರೆ.
‘ಮುಂಬೈನವರು (ಬಾಲಿವುಡ್) ನಾವು ನಮ್ಮ ತನವನ್ನು ಕಳೆದುಕೊಳ್ಳಬಾರದು. ಯಶ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಜತೆ ಕೆಲಸ ಮಾಡಿದ್ದು ಖುಷಿ ಇದೆ. ಈಗ ಧ್ರುವ ಜತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.