ಹೊಸದಿಗಂತ ಡಿಜಿಟಲ್ ಡೆಸ್ಕ್
ಚೀನಾದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಪ್ರವಾಸಿ ವೀಸಾವನ್ನು ಮತ್ತೆ ನೀಡಲು ಇದು ಸೂಕ್ತವಾದ ಸಮಯವಲ್ಲಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅರಿಂದಮ್ ಬಾಗ್ಚಿ ,’ಚೀನಾ ತಾನಾಗಿಯೇ ನಮಗೆ ವೀಸಾ ನೀಡಲಿಲ್ಲ. 2020ರಿಂದಲೇ ಭಾರತಕ್ಕೆ ವೀಸಾ ನೀಡುವುದು ನಿಲ್ಲಿಸಿದೆ’ ಎಂದರು.
ಶಾಂಘೈ ಸೇರಿದಂತೆ ಚೀನಾದ ವಿವಿಧ ನಗರಗಳ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವು ಇದೆ. ವೀಸಾ ನೀಡುವ ಬಗ್ಗೆ ಚರ್ಚೆ ಮಾಡಲು ಇದು ಸರಿಯಾದ ಸಮಯವಲ್ಲ ಎಂದು ಬಾಗ್ಚಿ ಹೇಳಿದರು.
ಕೆಲವು ದಿನಗಳ ಹಿಂದೆ ಭಾರತ ಚೀನಾ ರಾಷ್ಟ್ರೀಯರಿಗೆ ನೀಡಿರುವ ಪ್ರವಾಸಿ ವೀಸಾಗಳನ್ನು ಅಮಾನತು ಮಾಡಿತ್ತು. ಇದೀಗ ಭಾರತ ಚೀನಾದ ಪ್ರವಾಸಿ ವೀಸಾಗಳ ಮಾನ್ಯತೆ ರದ್ದುಗೊಳಿಸಿತ್ತು.