ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ನಾಯಕ ಮತ್ತು ಎಂಎಸ್ ಧೋನಿ ಐಪಿಎಲ್ನಿಂದ ನಿವೃತ್ತಿಯಾಗುವ ಕುರಿತು ಮಾಹಿತಿ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಸಂಭಾವ್ಯ ನಿವೃತ್ತಿಯ ಬಗ್ಗೆ ಇನ್ನೂ ಯೋಚಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ತಮ್ಮ ನಿವೃತ್ತಿ ನಿರ್ಧಾರವು ಅಂತಿಮವಾಗಿ ಸಿಎಸ್ಕೆ ದೊಡ್ಡ ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.
ಐಪಿಎಲ್ 2024 ಕ್ಕೆ ಮುಂಚಿತವಾಗಿ ಸಿಎಸ್ಕೆ ನಾಯಕತ್ವದಿಂದ ಕೆಳಗಿಳಿದು ಋತುರಾಜ್ ಗಾಯಕ್ವಾಡ್ಗೆ ಹೊಣೆಗಾರಿಕೆ ಹಸ್ತಾಂತರಿಸಿದಾಗಿನಿಂದ ಧೋನಿ ಅವರ ನಿವೃತ್ತಿಯ ವಿಷಯವು ಚರ್ಚೆಯಲ್ಲಿದೆ. 2023 ರಲ್ಲಿ ಸಿಎಸ್ಕೆ ತನ್ನ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು 2024 ರ ಋತುವು ಎಂಎಸ್ ಧೋನಿ ಅವರ ಕೊನೆಯ ಸೀಸನ್ ಎಂದು ನಿರೀಕ್ಷಿಸಿದ್ದರು. ಆದಾಗ್ಯೂ, ಧೋನಿ ತಮ್ಮ ಸಂಭಾವ್ಯ ನಿವೃತ್ತಿ ಬಗ್ಗೆ ಯಾವುದೇ ಸ್ಪಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. 2025ರಲ್ಲಿ ಮತ್ತೊಂದು ಬಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.
‘ಐಪಿಎಲ್ ತಂಡಗಳಲ್ಲಿ ಆಟಗಾರರನ್ನು ಉಳಿಸಿಕೊಳ್ಳುವಿಕೆ ನಿಯಮಗಳು ಪ್ರಕಟವಾಗಬೇಕಾಗಿದೆ. ಎಲ್ಲವನ್ನೂ ನಿರ್ಧರಿಸಲು ಫ್ರಾಂಚೈಸಿಗಳು ಮತ್ತು ಮ್ಯಾನೇಜ್ಮೆಂಟ್ಗೆ ಸಾಕಷ್ಟು ಸಮಯ ಉಳಿದಿದೆ. ಆದ್ದರಿಂದ ವಿವರಗಳು ಸ್ಪಷ್ಟವಾದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯ ನಮ್ಮ ಅಂಗಳದಲ್ಲಿ ಚೆಂಡು ಇಲ್ಲ. ನಿಯಮಗಳನ್ನು ಆಧರಿಸಿ ಎಲ್ಲವೂ ನಡೆಯಲಿದೆ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅಂತಿಮವಾಗಿ ಸಿಎಸ್ಕೆ ಪರವಾಗಿ ಉತ್ತಮವಾದ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದುವೇ ಅಂತಿಮ ಗುರಿ’ ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.