ವಿಜಯ್‌ ಪವರ್‌ಫುಲ್‌ ಸ್ಪೀಚ್‌ಗೆ ಮತದಾರ ಫಿದಾ, ಅಂಥದ್ದು ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಲಿವುಡ್ ಸ್ಟಾರ್ ನಟ ವಿಜಯ್ ತಳಪತಿ ಬೇಡಿಕೆಯಲ್ಲಿರುವಾಗಲೇ ನಟನೆಗೆ ಗುಡ್ ಬೈ ಹೇಳ್ತಿದ್ದಾರೆ. ಸಿನಿಮಾ ಬಿಟ್ಟು ‘ತಮಿಳಿಗ ವೆಟ್ರಿ ಕಳಗಮ್’ ಎನ್ನುವ ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ಪಕ್ಷದ ಮೊದಲ ರ‍್ಯಾಲಿ ಮಾಡಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದ ಈ ರ‍್ಯಾಲಿಯಲ್ಲಿ ವಿಜಯ್ ಪವರ್‌ಫುಲ್ ಆಗಿ ಭಾಷಣ ಮಾಡಿದ್ದಾರೆ. ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

ಈ ವೇಳೆ, ನಾನು ನನ್ನ ವೃತ್ತಿ ಜೀವನ ಉತ್ತುಂಗದಲ್ಲಿರುವಾಗ ತೊರೆದೆ. ನನ್ನ ಸಂಪಾದನೆ ತೊರೆದೆ. ನಾನು ಇಲ್ಲಿ ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ ಎಂದು ವಿಜಯ್ ಮಾತನಾಡಿದ್ದಾರೆ. ಈ ಮೂಲಕ ಸಿನಿಮಾ ಕೆರಿಯರ್‌ ತೊರೆಯುತ್ತಿರುವ ಕುರಿತು ನಟ ಸ್ಪಷ್ಟನೆ ನೀಡಿದ್ದಾರೆ. ಅವರ ಈ ಪವರ್‌ಫುಲ್ ಸ್ವೀಚ್ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಇನ್ನೂ ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು ಐದರಿಂದ 5 ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!