ಹೆಚ್ಚಿನವರು ತಮ್ಮ ಫಿಟ್‌ನೆಸ್ ಪ್ರಯಾಣವನ್ನು ಉತ್ಸಾಹದಿಂದ ಶುರುಮಾಡ್ತಾರೆ. ಪ್ರತಿದಿನ ಜಿಮ್ ಹೋಗಿ, ಡಯಟ್ ಪಾಲಿಸಿ, ಕಷ್ಟಪಟ್ಟು ವ್ಯಾಯಾಮ ಮಾಡ್ತಾರೆ. ಆದರೆ ಒಂದು ವರ್ಷ ಬಳಿಕ ಜಿಮ್ ಬಿಡುತ್ತೇವೆ ಅಂತಾರೆ. ಅಂದರೆ, ನಾವು ಗಳಿದ body ಕತೆ ಏನಾಗುತ್ತೆ? ದೇಹದಲ್ಲಿ ಏನು ಬದಲಾವಣೆಗಳು ಆಗುತ್ತವೆ? ಈ ಪ್ರಶ್ನೆ ಅನೇಕ ಫಿಟ್‌ನೆಸ್ ಪ್ರೇಮಿಗಳನ್ನು ಕಾಡುತ್ತದೆ. ನಿಜ ಹೇಳಬೇಕಾದರೆ, ಜಿಮ್ ನಿಲ್ಲಿಸಿದ ಬಳಿಕ ದೇಹದಲ್ಲಿ ಕೆಲವು ಗಮನಾರ್ಹ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.
ಸ್ನಾಯು ಶಕ್ತಿ ನಿಧಾನವಾಗಿ ಕುಸಿತ
ಜಿಮ್‌ನಲ್ಲಿ ವ್ಯಾಯಾಮ ಮಾಡಿದಾಗ ಸ್ನಾಯುಗಳು ಶಕ್ತಿ ಪಡೆಯುತ್ತವೆ, ಬಿಗಿಯಾಗುತ್ತವೆ. ಆದರೆ ಒಂದು ವರ್ಷ ವ್ಯಾಯಾಮ ನಿಲ್ಲಿಸಿದರೆ, “ಮಸ್‌ಲ್ ಅಟ್ರೋಫಿ” ಎಂಬ ಸ್ಥಿತಿ ಉಂಟಾಗುತ್ತದೆ. ಅಂದರೆ ಸ್ನಾಯುಗಳು ನಿಧಾನವಾಗಿ ಚುರುಕುಗೊಂಡ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಮೊದಲ ಕೆಲ ವಾರಗಳಲ್ಲಿ ವ್ಯತ್ಯಾಸ ಕಾಣದಿದ್ದರೂ, ನಂತರ ಬಲ ಕಡಿಮೆಯಾಗುತ್ತದೆ.
ಕೊಬ್ಬು ಸಂಗ್ರಹಣೆಯಲ್ಲಿ ಏರಿಕೆ
ವ್ಯಾಯಾಮ ನಿಲ್ಲಿಸಿದ ಬಳಿಕ ದೇಹದ ಮೆಟಾಬಾಲಿಸಂ ರೇಟ್ ನಿಧಾನಗೊಳ್ಳುತ್ತದೆ. ಹೀಗಾಗಿ ಆಹಾರದಲ್ಲಿನ ಕ್ಯಾಲೋರಿ ಹೆಚ್ಚು ಕಾಲ ದೇಹದಲ್ಲಿ ಉಳಿದು, ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ವಿಶೇಷವಾಗಿ ಹೊಟ್ಟೆ, ತೊಡೆ ಮತ್ತು ಕೈಗಳಲ್ಲಿ ಕೊಬ್ಬು ಹೆಚ್ಚಾಗುತ್ತದೆ.
ಕಾರ್ಯಕ್ಷಮತೆ ಕಡಿಮೆ
ನಿಯಮಿತ ಜಿಮ್ ಮಾಡುವವರು ಹೆಚ್ಚು ಕಾರ್ಯಕ್ಷಮತೆ ಇರುತ್ತದೆ. ಆದರೆ ವ್ಯಾಯಾಮ ನಿಲ್ಲಿಸಿದರೆ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಮೆಟ್ಟಿಲೇರುವುದು, ಓಡುವುದು ಅಥವಾ ತೀವ್ರ ಚಟುವಟಿಕೆ ಮಾಡಿದರೂ ಬೇಗ ಆಯಾಸ ಬರುತ್ತದೆ.
ಮನಸ್ಥಿತಿ ಮತ್ತು ಆತ್ಮವಿಶ್ವಾಸದಲ್ಲಿ ಬದಲಾವಣೆ
ವ್ಯಾಯಾಮ ಮಾಡಿದಾಗ ದೇಹದಲ್ಲಿ ಎಂಡಾರ್ಫಿನ್ ಎಂಬ “ಹ್ಯಾಪಿನೆಸ್ ಹಾರ್ಮೋನ್” ಬಿಡುಗಡೆಗೊಳ್ಳುತ್ತದೆ. ಜಿಮ್ ನಿಲ್ಲಿಸಿದಾಗ ಈ ಹಾರ್ಮೋನ್ ಉತ್ಪಾದನೆ ಕಡಿಮೆಯಾಗಿ ಮನಸ್ಸು ನಿಸ್ಸಹಾಯ, ಒತ್ತಡ ಅಥವಾ ಖಿನ್ನತೆಯಿಂದ ಕೂಡಬಹುದು. ಜೊತೆಗೆ ದೇಹದ ಆಕೃತಿ ಬದಲಾದಂತೆ ಆತ್ಮವಿಶ್ವಾಸವೂ ಕುಸಿಯುತ್ತದೆ.
ನಿದ್ರೆ ಮತ್ತು ದೈನಂದಿನ ಶಕ್ತಿ ಮಟ್ಟದಲ್ಲಿ ವ್ಯತ್ಯಾಸ
ವ್ಯಾಯಾಮದಿಂದ ದೇಹದ ನಿದ್ರೆ ಚಕ್ರ ಸಮತೋಲನದಲ್ಲಿರುತ್ತದೆ. ಆದರೆ ಜಿಮ್ ಬಿಡುತ್ತಿದ್ದಂತೆ ನಿದ್ರೆ ಗುಣಮಟ್ಟ ಹದಗೆಡುತ್ತದೆ, ಬೆಳಿಗ್ಗೆ ಅಲಸ್ಯ ಮತ್ತು ದೈನಂದಿನ ಶಕ್ತಿ ಮಟ್ಟ ಕುಸಿಯುತ್ತದೆ. ದೇಹದ ಶಕ್ತಿವ್ಯಯ ಕಡಿಮೆಯಾದ್ದರಿಂದ ತೂಕ ಹೆಚ್ಚಾಗುವ ಸಾಧ್ಯತೆಯೂ ಇದೆ.
ಒಂದು ವರ್ಷ ಜಿಮ್ ಮಾಡಿ ನಂತರ ಬಿಡುವುದರಿಂದ ದೇಹದ ಆಕಾರ, ಶಕ್ತಿ, ಮನಸ್ಥಿತಿ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಜಿಮ್‌ಗೆ ಹೋಗದಿದ್ದರೂ ಮನೆಯಲ್ಲೇ ಲಘು ವ್ಯಾಯಾಮ, ಯೋಗ ಅಥವಾ ವಾಕ್ ಮಾಡುವ ಅಭ್ಯಾಸ ಮುಂದುವರಿಸಿ. ಆಗ ನಿಮ್ಮ ದೇಹವೂ ಫಿಟ್ ಆಗಿ ಮನಸ್ಸು ಚುರುಕಾಗಿರುತ್ತದೆ.

