ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಹೆಚ್ಚು ಸೀಟ್ ಗೆಲ್ಲದಿದ್ರೆ ಕಾಂಗ್ರೆಸ್ ಸರ್ಕಾರಕ್ಕೆ ಕಷ್ಟ ಇದೆ ಎಂದು ಮಾಜಿ ಸಿಎಂ ಬಸವಾರಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಇನ್ನೇನು ಆರೇಳು ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಅತಿಹೆಚ್ಚು ಸ್ಥಾನವನ್ನು ಗೆಲ್ಲುವುದು ಕಾಂಗ್ರೆಸ್ಗೆ ಅನಿವಾರ್ಯ ಇಲ್ಲವಾದರೆ ಭವಿಷ್ಯಕ್ಕೆ ಸಮಸ್ಯೆ ಇದೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ಇದೆ. ಹೆಚ್ಚು ಸೀಟ್ ಗೆಲ್ಲದೇ ಹೋದ್ರೆ ಭವಿಷ್ಯಕ್ಕೆ ಕುತ್ತು ಎನ್ನುವ ವಿಷಯ ತಿಳಿದು ಆಪರೇಷನ್ ಹಸ್ತ ಮಾಡ್ತಿದ್ದಾರೆ. ಆದರೆ ಇದೂ ಯಶಸ್ವಿಯಾಗೋದಿಲ್ಲ ಎಂದಿದ್ದಾರೆ.