ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2025ನೇ ಸಾಲಿನ ಬಜೆಟ್ ಸಮಾಜಮುಖಿ ಆಗಿದೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ವರ್ಗಕ್ಕೂ ಸಮುದಾಯಕ್ಕೂ ಅಭಿವೃದ್ಧಿ ಕೊಟ್ಟಿದ್ದಾರೆ. ಕರಾವಳಿ ಭಾಗಕ್ಕೆ ಒಳ್ಳೆಯ ಯೋಜನೆ ಘೋಷಣೆ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ನಾನು ಪಕ್ಷಪಾತ ಮಾಡಲ್ಲ ಎಂದರು.
ಇನ್ನು ಬಿಜೆಪಿ ಶಾಸಕರು ಬಜೆಟ್ ಬಗ್ಗೆ ಏನಾದರೂ ಆರೋಪ ಮಾಡಲಿ. ಶಾಸಕನಾಗಿ ನಾನು ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೇನೆ, ಇದೊಂದು ಒಳ್ಳೆಯ ಬಜೆಟ್ ಎಂದು ಹೇಳಿದರು.