ಸಾಮಾನ್ಯವಾಗಿ ಜನರ ಮೂಗು ಯಾವ ರೀತಿ ಇದೆ ಎನ್ನುವ ಆಧಾರದಲ್ಲಿ ಅವರ ಗುಣಗಳ ಬಗ್ಗೆ ಹೇಳಲಾಗುತ್ತದೆ. ಇದರಿಂದ ಜನರನ್ನು ಈಸಿಯಾಗಿ ಅರ್ಥ ಮಾಡಿಕೊಳ್ಳಬಹುದಂತೆ. ಯಾವ ರೀತಿ ಮೂಗಿದ್ರೆ ಏನು ಅರ್ಥ? ಇಲ್ಲಿ ನೋಡಿ..
ದೊಡ್ಡ ಮೂಗು
ಮುಖದಲ್ಲಿ ಮೂಗೇ ದೊಡ್ಡದಾಗಿ ಕಾಣಿಸುತ್ತಿದ್ದರೆ ಅವರು ಪ್ರಾಕ್ಟಿಕಲ್ ಹಾಗೂ ಜಾಣರಂತೆ. ಯಾವಾಗಲೂ ಸ್ವತಂತ್ರವಾಗಿ ಬದುಕುವ ಇವರಿಗೆ ಧಿಮಾಕೂ ಜಾಸ್ತಿ. ಎಲ್ಲದರಲ್ಲೂ ತಮ್ಮ ಒಪಿನಿಯನ್ ತಂದಿಡುವ ವ್ಯಕ್ತಿತ್ವ. ಇವರಿಗೆ ಯಾರೂ ಬಾಸ್ ಇಲ್ಲ. ಹೊಸ ಚಾಲೆಂಜಸ್ ಇಷ್ಟ.
ಗುಂಡು ಮೂಗು, ಆದರೆ ತುದಿ ಚೂಪಾಗಿದ್ರೆ..
ಇಂತವರು ಬೇರೆಯವರ ದುಃಖಕ್ಕೆ ಸ್ಪಂದಿಸುತ್ತಾರೆ, ಸಾಮಾಜಿಕವಾಗಿ ಬೆರೆಯುತ್ತಾರೆ, ಬೆಚ್ಚಗಿನ ಹೃದಯದ ಜನ, ಓಪನ್ ಮೈಂಡೆಟ್, ತಾಳ್ಮೆ, ಉದಾರತನ, ಯಾವುದೇ ನಿಲುವನ್ನು ಸ್ಪಷ್ಟವಾಗಿ ಹೇಳೋದಿಲ್ಲ. ನಂಬಿಕೆಗೆ ಅರ್ಹರು, ಕ್ರಿಯೇಟಿವ್.
ಚೂಪು ಮೂಗು
ಈ ಮೂಗಿನವರಿಗೆ ಕಾನ್ಫಿಡೆನ್ಸ್ ಹೆಚ್ಚು, ಎಲ್ಲಾ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕು ಎನ್ನುತ್ತಾರೆ, ಲೀಡರ್ ಕ್ವಾಲಿಟಿ ಇದೆ, ಸ್ಟ್ರಾಂಗ್ ಮನಸ್ಸಿನ ಜನ, ಡೀಟೇಲ್ಸ್ ಇಷ್ಟಪಡುತ್ತಾರೆ, ನೋಡಲು ಸುಂದರವಾಗಿರುತ್ತಾರೆ.
ಗುಂಡು ಮೂಗು
ಯಾವಾಗಲೂ ಖುಷಿಯಾಗಿರುತ್ತಾರೆ, ಬೇರೆಯವರನ್ನು ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಮಾತನಾಡಬೇಕು ಎನಿಸುವ ಜನ, ಎಲ್ಲಾ ವಿಷಯಕ್ಕೂ ಕ್ಯೂರಿಯಾಸಿಟಿ, ಕ್ರಿಯೇಟಿವ್, ಉತ್ತಮ ಹೃದಯ, ಈಸಿ ಗೋಯಿಂಗ್, ಅರ್ಥ ಮಾಡಿಕೊಳ್ತಾರೆ.
ಗರುಡ ಮೂಗು
ಇವರು ಸೂಕ್ಷ್ಮವಾಗಿ ಎಲ್ಲವನ್ನೂ ನೋಡುತ್ತಾರೆ, ತುಂಬಾ ಶಾರ್ಪ್ ಮೈಂಡ್ ಇರುತ್ತದೆ, ಒಬ್ಬಂಟಿಯಾಗಿರೋಕೆ ಇಷ್ಟ, ಸ್ಟಾಟರ್ಜಿ ಮಾಡುತ್ತಾರೆ, ತುಂಬಾ ಜ್ಞಾನವುಳ್ಳವರು.