ನಿಮಗೆ ಯಾವಾಗಲಾದ್ರೂ ಅನಿಸಿದ್ಯಾ? ಪದೇ ಪದೆ ಒಂದೇ ಸಂಖ್ಯೆ ಕಣ್ಣೆದುರು ಕಾಣಿಸುತ್ತಿದೆ ಅಂತ? ಉದಾಹರಣೆಗೆ ನಿಮ್ಮೆದುರು ಹೋಗುತ್ತಿರೋ ಕಾರ್ ಅಥವಾ ಸ್ಕೂಟಿ ಸಂಖ್ಯೆ ಸಡನ್ ಆಗಿ ಕಣ್ಣಿಗೆ ಬೀಳುತ್ತದೆ. ಅದು 1111 ಆಗಿರುತ್ತದೆ. ಟೈಮ್ ನೋಡಿದಾಗ 11:11 ಅಥವಾ 11:11 ಆಗಿರುತ್ತದೆ. ಹೀಗೆ ಎಲ್ಲೆಲ್ಲೋ ಒಂದೇ ಅಂಕಿ ಕಣ್ಣಿಗೆ ಬೀಳುತ್ತದೆ.
ಇದು ಒಂದು ಬಾರಿಯಾದರೆ ಅದನ್ನು ಕಾಕತಾಳೀಯ ಎನ್ನಬಹುದು ಆದರೆ ಪದೇ ಪದೆ ಇದೇ ಆದರೆ ಅದನ್ನು ಕೋ ಇನ್ಸಿಡೆನ್ಸ್ ಎಂದು ನಂಬೋದು ಕಷ್ಟ. ಈ ರೀತಿ ಸಂಖ್ಯೆಗಳನ್ನು ಏಂಜಲ್ ನಂಬರ‍್ಸ್ ಎನ್ನುತ್ತಾರೆ.
ಇವು ನಿಮಗೆ ಬೇಕಂತಲೇ ಕಾಣಿಸುತ್ತವೆ. ಇದು ವಿಶ್ವದ ಸಂದೇಶ, ಇಡೀ ವಿಶ್ವ ನಿಮಗೆ ಏನನ್ನೋ ಹೇಳಬಯಸುತ್ತಿದೆ, ವಿಶ್ವದ ಸಂದೇಶ ಇದಾಗಿದ್ದು, ಪ್ರತೀ ಸಂಖ್ಯೆಗೂ ಒಂದೊಂದು ಅರ್ಥ ಇದೆ. 111,1111,11:11,1:11 ಈ ಅಂಕಿ ನಿಮ್ಮ ಕಣ್ಣಿಗೆ ಸದಾ ಬೀಳುತ್ತಿದ್ದರೆ. ನೀವು ಹೋಗುತ್ತಿರುವ ದಾರಿ ಸರಿಯಾಗಿದೆ ಎಂದರ್ಥ, ಜೀವನದಲ್ಲಿ ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ತೋರಿಸುವ ಸಂಖ್ಯೆ ಇದಾಗಿದೆ.
ನಿಮ್ಮ ನಿರ್ಧಾರ, ನಡೆಯುತ್ತಿರುವ ಹಾದಿ, ಮಾಡುವ ಆಯ್ಕೆ ಎಲ್ಲವೂ ಸರಿಯಾಗಿದೆ ಎನ್ನುವುದು ಈ ಸಂಖ್ಯೆಯ ಅರ್ಥವಾಗಿದೆ. ಇನ್ನೇನು ಸ್ವಲ್ಪವೇ ಸಮಯದಲ್ಲಿ ನಿಮಗೆ ಶುಭ ಸುದ್ದಿ ಸಿಗುವ ಸಂಕೇತ ಇದಾಗಿದೆ.