ಪ್ರಧಾನಿ ಮೋದಿ ಯಾವುದರಲ್ಲಿ ಓಡಾಡ್ತಾರೆ? ಐಷಾರಾಮಿ ವಿಮಾನ ಅಲ್ವಾ? : ಸಿಎಂ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಐಷಾರಾಮಿ ವಿಮಾನದಲ್ಲಿ ಓಡಾಡಿದ್ದನ್ನು ಬಿಜೆಪಿ ಟೀಕೆ ಮಾಡಿದೆ. ಇದಕ್ಕೆ ಸಿಎಂ ಉತ್ತರ ನೀಡಿದ್ದು, ಪ್ರಧಾನಿ ಮೋದಿ ಯಾವುದರಲ್ಲಿ ಓಡಾಡ್ತಾರೆ? ಐಷಾರಾಮಿ ವಿಮಾನದಲ್ಲಿಯೇ ತಾನೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಈ ರೀತಿ ಐಷಾರಾಮಿ ವಿಮಾನದಲಲಿ ಓಡಾಡಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ, ಜನರ ದುಡ್ಡು ಇವರ ಜಾತ್ರೆ ಎಂದು ಕಿಡಿಕಾರಿದ್ದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಎಲ್ಲವೂ ಚೆನ್ನಾಗಿದ್ಯಾ? ಕಷ್ಟದ ಸ್ಥಿತಿ ಇಲ್ವಾ? ಯಾವುದೇ ಸ್ಥಿತಿ ಇರಲಿ ಪಿಎಂ ಮೋದಿ ಎಂಥ ಫ್ಲೈಟ್‌ನಲ್ಲಿ ಓಡಾಡ್ತಾರೆ ನೋಡಿದ್ದೀರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here