Read It | ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಇರುವ ಬಣ್ಣ ಬಣ್ಣದ ಗೆರೆಯ ಅರ್ಥ ಏನು? ನಿಮ್ಮ ಟೂತ್‌ಪೇಸ್ಟ್ ನಲ್ಲಿ ಯಾವ ಬಣ್ಣ ಇದೆ?

ಪ್ರತಿದಿನ ಬಳಕೆಯಾಗುವ ಟೂತ್‌ಪೇಸ್ಟ್‌ ಟ್ಯೂಬ್‌ ಮೇಲೆ ಇರುವ ಬಣ್ಣದ ಚಿಕ್ಕ ಗುರುತುಗಳ ಬಗ್ಗೆ ನೀವು ಗಮನಹರಿಸಿದ್ದೀರಾ? ಈ ಕೆಂಪು, ಹಸಿರು, ನೀಲಿ ಅಥವಾ ಕಪ್ಪು ಬಣ್ಣದ ಗುರುತುಗಳು ಸಾಮಾನ್ಯವಾಗಿ ಡಿಸೈನ್ ಭಾಗವೆಂದು ನಾವು ಭಾವಿಸಬಹುದು. ಆದರೆ ಇವುಗಳಲ್ಲಿ ತುಂಬಾ ಆಳವಾದ ಅರ್ಥವಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವದಂತಿಗಳೂ ಹರಡಿವೆ. ಹಲವು ಜನರು ಈ ಬಣ್ಣಗಳ ಆಧಾರದಲ್ಲಿ ಟೂತ್‌ಪೇಸ್ಟ್ ಆಯ್ಕೆ ಮಾಡುತ್ತಿರುವುದೂ ಕಾಣಿಸುತ್ತಿದೆ.

ಮಾಹಿತಿಗಳ ಪ್ರಕಾರ, ಟೂಬ್ ಮೇಲೆ ಇರುವ ಬಣ್ಣಗಳು ಪೇಸ್ಟ್‌ನ ಅಂಶಗಳ ಬಗ್ಗೆ ಮಾಹಿತಿ ನೀಡುತ್ತವಂತೆ. ಉದಾಹರಣೆಗೆ, ಕೆಂಪು ಬಣ್ಣದ ಗುರುತು ಇರುವ ಪೇಸ್ಟ್‌ನಲ್ಲಿ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳ ಮಿಶ್ರಣವಿರುತ್ತದೆಯಂತೆ. ಹಸಿರು ಬಣ್ಣ ಇದ್ದರೆ ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲಾಗಿದೆ ಎಂದು ಹೇಳಲಾಗುತ್ತದೆ. ನೀಲಿ ಗುರುತಿದರೆ, ಅದರಲ್ಲಿ ನೈಸರ್ಗಿಕ ಪದಾರ್ಥಗಳ ಜೊತೆಗೆ ಔಷಧೀಯ ಅಂಶಗಳೂ ಸೇರಿರುತ್ತವಂತೆ. ಆದರೆ ಕಪ್ಪು ಬಣ್ಣದ ಗುರುತು ಇದ್ದರೆ, ಅದು ಶುದ್ಧ ರಾಸಾಯನಿಕ ಪದಾರ್ಥಗಳಿಂದ ಮಾತ್ರ ತಯಾರಿಸಲಾಗಿದೆ ಎಂಬ ಅಭಿಪ್ರಾಯವಿದೆ.

ಆದರೆ, ವಾಸ್ತವದಲ್ಲಿ ಈ ಬಣ್ಣದ ಗುರುತುಗಳು ಉತ್ಪಾದನಾ ಪ್ರಕ್ರಿಯೆಯಲ್ಲಿನ “ಪ್ಯಾಕ್‌ಮಾರ್ಕ್” ಎಂದು ಕರೆಯಲ್ಪಡುವ ಗುರುತುಗಳು ಮಾತ್ರ. ಅವು ಉತ್ಪಾದನಾ ಯಂತ್ರಕ್ಕೆ ಟ್ಯೂಬ್‌ನ ಎಲ್ಲಿ ಕಟ್ ಮಾಡಬೇಕು ಎಂಬುದನ್ನು ಸೂಚಿಸುವ ತಾಂತ್ರಿಕ ಗುರುತುಗಳಾಗಿವೆ. ಈ ಬಣ್ಣಗಳು ಟೂತ್‌ಪೇಸ್ಟ್‌ನ ಅಂಶಗಳ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂಬುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಹಾಗಾಗಿ, ಟೂತ್‌ಪೇಸ್ಟ್ ಆಯ್ಕೆ ಮಾಡುವಾಗ ಟ್ಯೂಬ್ ಮೇಲಿನ ಬಣ್ಣವನ್ನು ಆಧರಿಸದೇ, ಪ್ಯಾಕಿಂಗ್ ಮೇಲೆ ನೀಡಿರುವ ಅಂಶಗಳ ಪಟ್ಟಿ, ಪ್ರಯೋಜನಗಳು ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!