ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಸಮಾರಂಭಗಳು ಜೈಸಲ್ಮೇರ್‌ನಲ್ಲಿ ನಡೆಯುತ್ತಿವೆ. ಇಂದು ಕಿಯಾರಾ ಹಾಗೂ ಸಿದ್ಧಾರ್ಥ ಮದುವೆ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಮದುವೆಯನ್ನು ನಾಳೆಗೆ ಮುಂದೂಡಲಾಗಿದೆ.
ಸೂರ್ಯಗಢ್ ಪ್ಯಾಲೇಸ್ ಈಗಾಗಲೇ ಮಧುಮಗಳಂತೆ ಕಂಗೊಳಿಸುತ್ತಿದೆ, ಸೆಲೆಬ್ರಿಟಿಗಳು, ಅತಿಥಿಗಳು ಈಗಾಗಲೇ ಮದುವೆಗೆಂದು ಆಗಮಿಸಿದ್ದರು. ಆದರೆ ಕಾರಣಾಂತರಗಳಿಂದಾಗಿ ಮದುವೆ ಪೋಸ್ಟ್‌ಪೋನ್ ಆಗಿದೆ. ಹೊಟೇಲ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಅತಿಥಿಗಳ ಮೊಬೈಲ್ ಬಳಕೆ ಕೂಡ ಬ್ಯಾನ್ ಮಾಡಲಾಗಿದೆ. ನಾಳೆ ವಿವಾಹ ನೆರವೇರಲಿದ್ದು, ಖುದ್ದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಪೋಸ್ಟ್ ಮಾಡಲಿದ್ದಾರಂತೆ!