ಮದುವೆಯಾದ ವರ್ಷದಲ್ಲಿ ಇದ್ದ ರೊಮ್ಯಾನ್ಸ್, ಸ್ಪಾರ್ಕ್ಟ್ ವರ್ಷದ ನಂತರ ಕಮ್ಮಿಯಾಗುತ್ತದೆ. ಇನ್ನು ವರ್ಷ ಕಳೆದಂತೆ ಎಲ್ಲರೂ ದೂರ ದೂರ ಎನಿಸುತ್ತದೆ. ಮಕ್ಕಳಾದಮೇಲಂತೂ ಲೈಫ್‌ನಲ್ಲಿ ಕಳೆದೇ ಹೋಗುವಂತಾಗುತ್ತದೆ. ಇದೆಲ್ಲ ಇರಲಿ, ನಿಮ್ಮ ರೊಮ್ಯಾನ್ಸ್ ಜೀವಂತವಾಗಿರೋಕೆ ಹೀಗೆ ಮಾಡಿ..
ಮಕ್ಕಳಿಗೂ ಮುನ್ನ ಅಥವಾ ಮದುವೆಯ ಮೊದಲ ವರ್ಷದಲ್ಲಿ ನೀವು ಹೋಗ್ತಿದ್ದ ರೆಸ್ಟೋರೆಂಟ್ಸ್, ಡೇಟ್‌ನೈಟ್ಸ್‌ಗಳನ್ನು ಮರೆಯಬೇಡಿ. ಈಗಲೂ ಹೋಗಿಬನ್ನಿ ಇಂಟಿಮೆಸಿ ಹೆಚ್ಚಿಸಿಕೊಳ್ಳಿ.
ಸೆಕ್ಸ್ ವಿಷಯ ಓವರ್‌ರೇಟೆಡ್ ಅಲ್ಲ, ದಾಂಪತ್ಯದಲ್ಲಿ ಅದೂ ಒಂದು ಭಾಗ, ವಾರಕ್ಕೊಮ್ಮೆಯಾದರೂ ಇಂಟಿಮೆಸಿ ಇರಲಿ.
ಸೆಕ್ಸ್ ಅಷ್ಟೇ ಅಲ್ಲ, ಹಗ್, ಕಿಸ್, ಮುದ್ದು ಮಾಡೋದು, ಮುದ್ದಾಗಿ ಮಾತನಾಡೋದು ಇವೆಲ್ಲವೂ ಯಾವಾಗಲೂ ಇರಲಿ. ಇದು ಕಡಿಮೆಯಾಗೋದು ಬೇಡ.
ಮಾತನಾಡಿ, ಕಮ್ಯುನಿಕೇಷನ್ ಕೀ. ಹೇಗನಿಸುತ್ತಿದೆ, ಏನು ಅನಿಸುತ್ತದೆ, ಎಷ್ಟು ಸಮಯ ಕಳೆಯುತ್ತಿದ್ದೀರಿ ಎನ್ನುವ ಬಗ್ಗೆ ಗಮನ ಇರಲಿ.
ಮಕ್ಕಳು, ಸ್ನೇಹಿತರು, ಪೋಷಕರು ಎಲ್ಲವೂ ಇರಲಿ ಆದರೆ ಪಾರ್ಟ್‌ನರ್ ಜೊತೆ ಕಳೆಯುವ ಸಮಯಕ್ಕೆ ಕತ್ತರಿ ಹಾಕ್ಬೇಡಿ. ಇಬ್ಬರಿಗೇ ಇಂಟಿಮೇಟ್ ಸಮಯ ಸಿಗಲಿ.
ಯಾವುದೂ ವರ್ಕೌಟ್ ಆಗ್ತಿಲ್ಲ ಎನಿಸಿದರೆ ಥೆರಪಿ ಟ್ರೈ ಮಾಡಿ. ಇದು ಟೈಮ್‌ವೇಸ್ಟ್ ಅಲ್ಲ.