ಪ್ರತೀ ದಿನ ಹಲ್ಲುಜ್ಜುವಾಗ ಸ್ವಲ್ಪ ಆದ್ರೂ ಪೇಸ್ಟ್ ತಿಂದೇ ತಿಂದಿರುತ್ತೀವಿ. ಇನ್ನು ಮಕ್ಕಳು ಕೆಲವೊಮ್ಮೆ ಬೇಕಂತಲೇ ತಿನ್ನುತ್ತಾರೆ. ಈ ರೀತಿ ಮಾಡಿದಾಗ ಏನಾಗುತ್ತದೆ?
ಸ್ವಲ್ಪ ಪ್ರಮಾಣದಲ್ಲಿ ಟೂತ್‌ಪೇಸ್ಟ್ ದೇಹದ ಒಳಗೆ ಹೋದ್ರೆ ಅಷ್ಟೇನೂ ತೊಂದರೆ ಇಲ್ಲ ಆದರೆ ಅತಿಯಾಗಿ ಸೇವನೆ ಮಾಡಿದರೆ ದೇಹದ ಫ್ಲೋರೈಡ್ ಲೆವೆಲ್‌ನಲ್ಲಿ ಹೆಚ್ಚು ಕಮ್ಮಿಯಾಗಿ ರಕ್ತ ಸಂಚಲನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ವಾಂತಿ, ವಾಕರಿಕೆ ಬರುತ್ತದೆ. ಅಷ್ಟೇ ಅಲ್ಲದೆ ಅತಿಯಾಗಿ ತಿಂದರೆ ಇಂಟಸ್ಟೇನ್ ಬ್ಲಾಕ್ ಆಗಿ ಬೇಧಿ ಆಗುತ್ತದೆ.