ಪಕ್ಷದಲ್ಲಿ ಅವರ ಸ್ಥಾನವೇನು?: ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ಗೆ ಶಶಿ ತರೂರ್ ತಿರುಗೇಟು!

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಕೇರಳ ಕಾಂಗ್ರೆಸ್ ನಾಯಕ ಕೆ ಮುರಳೀಧರನ್ , ರಾಜ್ಯ ರಾಜಧಾನಿಯಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಅವರನ್ನು (ಶಶಿ ತರೂರ್) ಆಹ್ವಾನಿಸುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರೂ ಆಗಿರುವ ಶಶಿ ತರೂರ್ ಅವರನ್ನು ಇನ್ಮುಂದೆ ‘ನಮ್ಮಲ್ಲಿ ಒಬ್ಬರು’ ಎಂದು ಸಹ ಪರಿಗಣಿಸಲಾಗುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.

ಇದೀಗ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಶಶಿ ತರೂರ್,ಇಂತಹ ಹೇಳಿಕೆಗಳನ್ನು ನೀಡುವ ಜನರು ಯಾರು ಮತ್ತು ಅವರ ಪಕ್ಷದಲ್ಲಿ ಯಾವ ಸ್ಥಾನವನ್ನು ಹೊಂದಿದ್ದಾರೆ ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.

ಈ ಹೇಳಿಕೆಗಳ ಬಗ್ಗೆ ಕೇಳಿದಾಗ ಸುದ್ದಿಗಾರರಿಗೆ ಉತ್ತರಿಸಿದ ತರೂರ್, ‘ಮೊದಲನೆಯದಾಗಿ, ಇದನ್ನು ಹೇಳಲು ಅವರೂ ಒಂದು ಆಧಾರವನ್ನು ಹೊಂದಿರಬೇಕು. ಇದನ್ನೆಲ್ಲ ಹೇಳಲು ಅವರು ಯಾರು? ಪಕ್ಷದಲ್ಲಿ ಅವರ ಸ್ಥಾನವೇನು? ಎಂಬುದನ್ನು ನಾನು ತಿಳಿಯ ಬಯಸುತ್ತೇನೆ’ ಎಂದು ಹೇಳಿದರು.

ಮೊದಲು ದೇಶ ಮುಖ್ಯ ಮತ್ತು ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳು ಎಂದು ತರೂರ್ ಹೇಳಿದ ಒಂದು ದಿನದ ನಂತರ ಮುರಳೀಧರನ್ ಅವರ ಪ್ರತಿಕ್ರಿಯೆ ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!